ಅಬುಧಾಬಿ: ಶ್ರೀಲಂಕಾ ಹಾಗೂ ಪಾಕಿಸ್ತಾನ ತಂಡಗಳ ನಡುವೆ ಇಲ್ಲಿನ ಶೇಕ್ ಜಯೇದ್ ಕ್ರೀಡಾಂಗಣದಲ್ಲಿ ನಡೆದ ಮೂರು ಪಂದ್ಯಗಳ ಸರಣಿಯ ಪ್ರಥಮ ಟೆಸ್ಟ್ ಡ್ರಾನಲ್ಲಿ ಕೊನೆಗೊಂಡಿತು.
ಕೊನೆಯ ದಿನದಾಟದಲ್ಲಿ ಗೆಲ್ಲಲು 170 ರನ್‌ಗಳ ಗುರಿಯನ್ನು ಪಡೆದ ಪಾಕಿಸ್ತಾನಕ್ಕೆ ಗುರಿ ಮುಟ್ಟಲು ಅಗತ್ಯವಿದ್ದಷ್ಟು ಕಾಲಾವಕಾಶ ಮಾತ್ರ ಇರಲಿಲ್ಲ. ಆದ್ದರಿಂದ 10 ಓವರುಗಳಲ್ಲಿ 1 ವಿಕೆಟ್ ಕಳೆದುಕೊಂಡು 21 ರನ್ ಗಳಿಸುವಷ್ಟರಲ್ಲಿ ಅಂತಿಮ ದಿನವಾದ ಶನಿವಾರದ ಆಟಕ್ಕೆ ತೆರೆಬಿತ್ತು. ಅಲ್ಲಿಗೆ ಸರಣಿ 0-0ಯಲ್ಲಿಯೇ ಉಳಿಯಿತು.
ಮೊದಲ ಇನಿಂಗ್ಸ್‌ನಲ್ಲಿ 314 ರನ್‌ಗಳ ಹಿನ್ನಡೆ ಪಡೆದಿದ್ದ ಲಂಕಾ ಸೋಲಿನ ಅಪಾಯ ಎದುರಿಸಿತ್ತು. ಆದರೆ ಆಕರ್ಷಕ ದ್ವಿಶತಕ ಗಳಿಸಿದ ಕುಮಾರ ಸಂಗಕ್ಕಾರ (211) ಮತ್ತು ಶತಕ ಪೂರೈಸಿದ ಪ್ರಸನ್ನ ಜಯವರ್ಧನೆ (120) ಪಾಕ್ ತಂಡದ ಗೆಲುವಿನ ಕನಸನ್ನು ಪುಡಿಗಟ್ಟಿದ್ದರು.
ಸಂಕ್ಷಿಪ್ತ ಸ್ಕೋರ್: ಶ್ರೀಲಂಕಾ: ಮೊದಲ ಇನಿಂಗ್ಸ್ 74.1 ಓವರುಗಳಲ್ಲಿ 197 ಹಾಗೂ ಎರಡನೇ ಇನಿಂಗ್ಸ್ 168 ಓವರುಗಳಲ್ಲಿ 483 (ಲಾಹಿರು ಥಿರಿಮನ್ನೆ 68, ಕುಮಾರ ಸಂಗಕ್ಕಾರ 211, ಮ್ಯಾಥ್ಯೂಸ್ 22, ಮಹೇಲ ಜಯವರ್ಧನೆ 120, ರಂಗನ ಹೆರಾತ್ 23; ಉಮರ್ ಗುಲ್ 64ಕ್ಕೆ4); ಪಾಕಿಸ್ತಾನ: ಪ್ರಥಮ ಇನಿಂಗ್ಸ್ 174.4 ಓವರುಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 511 ಡಿಕ್ಲೇರ್ಡ್. ಫಲಿತಾಂಶ: ಡ್ರಾ; ಪಂದ್ಯ ಶ್ರೇಷ್ಠ: ಕುಮಾರ ಸಂಗಕ್ಕಾರ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.