ADVERTISEMENT

ಕ್ರಿಕೆಟ್: ಸಂಕಷ್ಟದಲ್ಲಿ ಮುಂಬೈ ತಂಡ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2012, 19:30 IST
Last Updated 13 ಆಗಸ್ಟ್ 2012, 19:30 IST

ಬೆಂಗಳೂರು: ಶಿಸ್ತಿನ ಬೌಲಿಂಗ್ ನಡೆಸಿದ ಕೆಎಸ್‌ಸಿಎ ಇಲೆವೆನ್ ತಂಡದವರು ಶಫಿ ದಾರಾಶಾ ಅಖಿಲ ಭಾರತ ಆಹ್ವಾನಿತ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಮುಂಬೈ ಕ್ರಿಕೆಟ್ ಸಂಸ್ಥೆ ತಂಡವನ್ನು ಸಂಕಷ್ಟಕ್ಕೆ ದೂಡಿದ್ದಾರೆ.

ಆಲೂರು ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಇಲೆವೆನ್ 179.4 ಓವರ್‌ಗಳಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 564 ರನ್ ಕಲೆ ಹಾಕಿತು. ಭಾನುವಾರದ ಅಂತ್ಯಕ್ಕೆ ಈ ತಂಡ 9 ವಿಕೆಟ್ ನಷ್ಟಕ್ಕೆ 556 ರನ್ ಕಲೆ ಹಾಕಿತ್ತು. ಸೋಮವಾರ ಕೇವಲ ಎಂಟು ರನ್ ಕಲೆ ಹಾಕಿ ಆಲ್‌ಔಟ್ ಆಯಿತು.

ಮೂರು ವಿಕೆಟ್ ಪಡೆದ ವೇಗಿ ಅಭಿಮನ್ಯು ಮಿಥುನ್ ಮುಂಬೈಗೆ ಈ ಮೊತ್ತ ಸವಾಲು ಎನಿಸುವಂತೆ ಮಾಡಿದರು. ಆದರೂ ಹಿಕಿನ್ ಶಹಾ (ಬ್ಯಾಟಿಂಗ್ 89) ಅವರ ಜವಾಬ್ದಾರಿಯುತ ಆಟದಿಂದ ಮುಂಬೈ ಅಲ್ಪ ಮೊತ್ತಕ್ಕೆ ಕುಸಿತ ಕಾಣುವುದರಿಂದ ಪಾರಾಯಿತು. ಈ ಪರಿಣಾಮ ಮುಂಬೈ ಮೂರನೇ ದಿನವಾದ ಸೋಮವಾರದ ಅಂತ್ಯಕ್ಕೆ 87 ಓವರ್‌ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 294 ರನ್ ಗಳಿಸಿತು.

ಸಂಕ್ಷಿಪ್ತ ಸ್ಕೋರು: ಕೆಎಸ್‌ಸಿಎ ಇಲೆವೆನ್ 179.4 ಓವರ್‌ಗಳಲ್ಲಿ 564. (ಅಮಿತ್ ವರ್ಮಾ 219, ಸಿ.ಎಂ. ಗೌತಮ್ 57, ರಾಜು ಭಟ್ಕಳ 40, ಕೆ. ಗೌತಮ್ 82; ಕ್ಷೇಮಲ್ ವೆಂಗ್‌ಸರ್ಕಾರ್ 109ಕ್ಕೆ4, ಅಭಿಷೇಕ್ ನಾಯರ್ 62ಕ್ಕೆ2, ರಾಕೇಶ್ ಪ್ರಭು 71ಕ್ಕೆ2).

 ಮುಂಬೈ ಕ್ರಿಕೆಟ್ ಸಂಸ್ಥೆ 87 ಓವರ್‌ಗಳಲ್ಲಿ 7 ವಿಕೆಟ್‌ಗೆ 294. (ಸ್ವಪ್ನಿಲ್ ಸಾಳ್ವಿ 38, ಕೌಸ್ತುಬ್ ಪವಾರ್ 32, ಅಭಿಷೇಕ್ ನಾಯರ್ 35, ಹಿಕಿನ್ ಶಹಾ ಬ್ಯಾಟಿಂಗ್ 89; ಅಭಿಮನ್ಯು ಮಿಥುನ್ 48ಕ್ಕೆ3).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.