ADVERTISEMENT

ಕ್ರಿಕೆಟ್: ಸಂಕಷ್ಟದಲ್ಲಿ ಶ್ರೀಲಂಕಾ ತಂಡ

​ಪ್ರಜಾವಾಣಿ ವಾರ್ತೆ
Published 5 ಜನವರಿ 2012, 19:30 IST
Last Updated 5 ಜನವರಿ 2012, 19:30 IST

ಕೇಪ್‌ಟೌನ್ (ಎಎಫ್‌ಪಿ): ದಕ್ಷಿಣ ಆಫ್ರಿಕಾ ನೀಡಿರುವ ಬೃಹತ್ ಸವಾಲಿನ ಮುಂದೆ ತತ್ತರಿಸಿರುವ ಶ್ರೀಲಂಕಾ ತಂಡದವರು ಇಲ್ಲಿ ನಡೆಯುತ್ತಿರುವ ಮೂರನೇ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ಸಂಕಷ್ಟದಲ್ಲಿ ಸಿಲುಕಿ ಕೊಂಡಿದ್ದಾರೆ.

ಆತಿಥೇಯ ತಂಡ ಮೊದಲು ಬ್ಯಾಟ್ ಮಾಡಿ 139 ಓವರ್‌ಗಳಲ್ಲಿ ನಾಲ್ಕು ವಿಕೆಟ್‌ಗೆ 580 ರನ್ ಗಳಿಸಿ ಡಿಕ್ಲೇರ್ಡ್ ಮಾಡಿಕೊಂಡಿತ್ತು. ಇದಕ್ಕುತ್ತರವಾಗಿ ಲಂಕಾ ಮೊದಲ ಇನಿಂಗ್ಸ್‌ನಲ್ಲಿ 239 ರನ್‌ಗೆ ಆಲ್ ಔಟ್ ಆಗಿ ಫಾಲೋ ಆನ್ ಎದುರಿಸಿತು.

ಮೂರನೇ ದಿನವಾದ ಗುರುವಾರದ ಆಟದ ಅಂತ್ಯಕ್ಕೆ ಲಂಕಾ ಎರಡನೇ ಇನಿಂಗ್ಸ್‌ನಲ್ಲಿ 53 ಓವರ್‌ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 138 ರನ್ ಗಳಿಸಿ ಸಂಕಷ್ಟಕ್ಕೆ ಸಿಲುಕಿದೆ.

ಸಂಕ್ಷಿಪ್ತ ಸ್ಕೋರು: ದಕ್ಷಿಣ ಆಫ್ರಿಕಾ 139 ಓವರ್‌ಗಳಲ್ಲಿ 4 ವಿಕೆಟ್‌ಗೆ 580 ಡಿಕ್ಲೇರ್ಡ್; ಶ್ರೀಲಂಕಾ 73.5 ಓವರ್‌ಗಳಲ್ಲಿ 239 (ಮಾಹೇಲ ಜಯವರ್ಧನೆ 30, ದಿನೇಶ್ ಚಾಂದಿಮಾಲ್ 35; ಡೇಲ್ ಸ್ಟೈನ್ 56ಕ್ಕೆ3). ಎರಡನೇ ಇನಿಂಗ್ಸ್ 53 ಓವರ್‌ಗಳಲ್ಲಿ 4ವಿಕೆಟ್‌ಗೆ 138(ಕುಮಾರ ಸಂಗಕ್ಕಾರ 34, ತಿಲಾನ್ ಸಮರವೀರ ಬ್ಯಾಟಿಂಗ್ 19; ಮಾರ್ನ್ ಮಾರ್ಕೆಲ್ 29ಕ್ಕೆ1, ಇಮ್ರಾನ್ ತಾಹಿರ್ 37ಕ್ಕೆ1).
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.