ಬೆಂಗಳೂರು: ಲೋಕೇಶ್ (13ಕ್ಕೆ5 ) ಅವರ ಉತ್ತಮ ಬೌಲಿಂಗ್ ಮತ್ತು ಗೌತಮ್ ರೆಡ್ಡಿ (32; 11ಎಸೆತ, 3ಬೌಂಡರಿ, 3ಸಿಕ್ಸರ್) ಅವರ ನೆರವಿ ನಿಂದ ನ್ಯೂ ಹೊರೈಜನ್ ಕಾಲೇಜು ತಂಡವು ಇಲ್ಲಿ ನಡೆಯುತ್ತಿರುವ ಬೆಂಗ ಳೂರು ವಿಶ್ವವಿದ್ಯಾಲಯ ಅಂತರ ಕಾಲೇಜು ಟ್ವೆಂಟಿ–20 ಕ್ರಿಕೆಟ್ ಟೂರ್ನಿ ಯಲ್ಲಿ ಸೆಮಿಫೈನಲ್ ತಲುಪಿದೆ.
ಶನಿವಾರ ಸೆಂಟ್ರಲ್ ಕಾಲೇಜು ಮೈದಾನದಲ್ಲಿ ನಡೆದ ಕ್ವಾರ್ಟರ್ ಫೈನಲ್‌ನಲ್ಲಿ ಹೊರೈಜನ್ ಕಾಲೇಜು ತಂಡವು 15 ರನ್‌ಗಳಿಂದ ಸಂತ ಜೋಸೆಫ್ ಕಲಾ ಮತ್ತು ವಿಜ್ಞಾನ ಕಾಲೇಜು ತಂಡದ ವಿರುದ್ಧ ಗೆದ್ದಿತು. ಮೊದಲು ಬ್ಯಾಟಿಂಗ್ ಮಾಡಿದ ಹೊರೈಜನ್ ತಂಡವು 20 ಓವರ್‌ಗಳಲ್ಲಿ 118 ರನ್ ಗಳಿಸಿತು. ನಂತರ ಬ್ಯಅಟಿಂಗ್ ಮಾಡಿದ ಸಂತ ಜೋಸೆಫ್ ತಂಡವು 104 ರನ್‌ಗಳಿಗೆ ಎಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು.