ADVERTISEMENT

ಕ್ರಿಕೆಟ್: ಸೆಮಿಫೈನಲ್‌ಗೆ ಏರ್ ಇಂಡಿಯಾ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2011, 19:30 IST
Last Updated 3 ಸೆಪ್ಟೆಂಬರ್ 2011, 19:30 IST

ಬೆಂಗಳೂರು: ನಾಯಕ ಹೃಷಿಕೇಶ್ ಕಾನಿಟ್ಕರ್ (ಔಟಾಗದೆ 95) ಅವರ ಆಕರ್ಷಕ ಬ್ಯಾಟಿಂಗ್ ಸಹಾಯದಿಂದ ಏರ್ ಇಂಡಿಯಾ ತಂಡದವರು ಇಲ್ಲಿ ನಡೆಯುತ್ತಿರುವ ಬಿಸಿಸಿಐ ಕಾರ್ಪೊರೇಟ್ ಟ್ರೋಫಿ  ಕ್ರಿಕೆಟ್ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದಾರೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ `ಸಿ~ ಗುಂಪಿನ ಪಂದ್ಯದಲ್ಲಿ ಏರ್ ಇಂಡಿಯಾ ಆರು ವಿಕೆಟ್‌ಗಳಿಂದ ಸ್ಟೇಟ್ ಬ್ಯಾಂಕ್ ಆಫ್ ಪಟಿಯಾಲ (ಎಸ್‌ಬಿಪಿ) ತಂಡವನ್ನು ಸೋಲಿಸಿತು.
ಎಸ್‌ಬಿಪಿ ನೀಡಿದ 172 ರನ್‌ಗಳ ಗುರಿಯನ್ನು ಏರ್ ಇಂಡಿಯಾ 35.5 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು ತಲುಪಿತು.

97 ಎಸೆತಗಳನ್ನು ಎದುರಿಸಿದ ಕಾನಿಟ್ಕರ್ 11 ಬೌಂಡರಿ ಹಾಗೂ ಎರಡು ಸಿಕ್ಸರ್ ಎತ್ತಿದರು. ಅವರಿಗೆ ಮೊಹಮ್ಮದ್ ಕೈಫ್ (32) ಉತ್ತಮ ಸಾಥ್ ನೀಡಿದರು. ಮಳೆಯ ಕಾರಣ ಪಂದ್ಯವನ್ನು 47 ಓವರ್‌ಗಳಿಗೆ ಸೀಮಿತಗೊಳಿಸಲಾಗಿತ್ತು.

ಏರ್ ಇಂಡಿಯಾ ಸೆಪ್ಟೆಂಬರ್ ಆರರಂದು ಇಲ್ಲಿಯೇ ನಡೆಯಲಿರುವ ಸೆಮಿಫೈನಲ್‌ನಲ್ಲಿ ಹಾಲಿ ಚಾಂಪಿಯನ್ ಆಯಿಲ್ ಇಂಡಿಯಾ ಕಾರ್ಪೊರೇಷನ್ ಂಡವನ್ನು ಎದುರಿಸಲಿದೆ. ಈ ಪಂದ್ಯ ವಿಶಾಖಪಟ್ಟಣದಲ್ಲಿ ನಡೆಯಬೇಕಿತ್ತು. ಆದರೆ ಮಳೆ ಕಾರಣ ಇಲ್ಲಿಗೆ ಸ್ಥಳಾಂತರಿಸಲಾಗಿದೆ. 

 ಸಂಕ್ಷಿಪ್ತ ಸ್ಕೋರ್: ಸ್ಟೇಟ್ ಬ್ಯಾಂಕ್ ಆಫ್ ಪಟಿಯಾಲ: 47 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 171 (ರಾಕೇಶ್ ರೆಹ್ನಿ 47, ಪಂಕಜ್ ಧರ್ಮಾನಿ 36, ಸಂಜಯ್ ಮಹಾಜನ್ 39, ಸಿದ್ಧಾರ್ಥ್ ತ್ರಿವೇದಿ 22ಕ್ಕೆ3); ಏರ್ ಇಂಡಿಯಾ: 35.5 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 172 (ಹೃಷಿಕೇಶ್ ಕಾನಿಟ್ಕರ್ ಔಟಾಗದೆ 95, ಮೊಹಮ್ಮದ್ ಕೈಫ್ 32; ಗುರ್‌ಪ್ರೀತ್ ಸಿಂಗ್ 27ಕ್ಕೆ2). ಫಲಿತಾಂಶ: ಏರ್ ಇಂಡಿಯಾ ತಂಡಕ್ಕೆ ಆರು ವಿಕೆಟ್ ಗೆಲುವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.