ADVERTISEMENT

ಕ್ರಿಡೆ: ಚುಟುಕು- ಗುಟುಕು

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2012, 19:30 IST
Last Updated 9 ಏಪ್ರಿಲ್ 2012, 19:30 IST

ಸೆಮಿಫೈನಲ್‌ಗೆ ಎಂಬಿಸಿ

ಬೆಂಗಳೂರು:
ಮಂಗಳೂರು ಬ್ಯಾಸ್ಕೆಟ್‌ಬಾಲ್ ಕ್ಲಬ್ ತಂಡ (ಎಂಬಿಸಿ)ವು ರಾಜ್ಯ ಸಬ್‌ಜೂನಿಯರ್ ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌ನ ಬಾಲಕರ ವಿಭಾಗದ ಸೆಮಿಫೈನಲ್ ತಲುಪಿದೆ.

ಸೋಮವಾರದ ಎಂಟರ ಘಟ್ಟದ ಪಂದ್ಯಗಳಲ್ಲಿ ಎಂಬಿಸಿ 37-14ರಿಂದ ಮಂಡ್ಯದ ವಿವೇಕಾನಂದ ತಂಡವನ್ನು, ಚಂದರಗಿಯ ಎಸ್‌ಪಿ ಶಾಲೆಯು 29-19ರಿಂದ ವಿವೇಕ್ಸ್  ತಂಡವನ್ನು, ಜೆಎಸ್‌ಸಿ 30-22ರಿಂದ ಐಬಿಬಿಸಿಯನ್ನು, ಯಂಗ್ ಓರಿಯನ್ಸ್ 24-12ರಿಂದ ಶಿವಮೊಗ್ಗ ಯೂತ್ಸ್ ವಿರುದ್ಧ ಗೆಲುವು ಸಾಧಿಸಿದವು.

ಬಾಲಕಿಯರ ವಿಭಾಗದ ಪಂದ್ಯಗಳಲ್ಲಿ ಗೆದ್ದ ಮಂಡ್ಯದ ಎಸ್‌ಪಿ ಸ್ಕೂಲ್, ವಿಮಾನಪುರ ಸ್ಪೋರ್ಟ್ಸ್ ಕ್ಲಬ್, ಶಿವಮೊಗ್ಗ ಯೂತ್ಸ್, ಮೌಂಟ್ಸ್ ಕ್ಲಬ್ ತಂಡಗಳು ಸೆಮಿಫೈನಲ್ ಲೀಗ್  ತಲುಪಿದವು.

ವಿವಿಧೆಡೆ ಕೆಎಸ್‌ಸಿಎ ಶಿಬಿರ ಆರಂಭ
ಪ್ರಜಾವಾಣಿ ವಾರ್ತೆ
ಬೆಂಗಳೂರು:
ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ (ಕೆಎಸ್‌ಸಿಎ) ಕ್ರಿಕೆಟ್ ಅಕಾಡೆಮಿ ಮತ್ತು ರಾಯಲ್ ಚಾಲೆಂಜರ್ಸ್ ಸಹಭಾಗಿತ್ವದಲ್ಲಿ ಬೇಸಿಗೆಯ ಉಚಿತ ತರಬೇತಿ ಶಿಬಿರ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸೋಮವಾರ ಆರಂಭವಾಯಿತು. 

ಮೈಸೂರಿನ ಗಂಗೋತ್ರಿ ಗ್ಲೇಡ್ಸ್ ಮೈದಾನದಲ್ಲಿ 16 ಮತ್ತು 19 ವರ್ಷದೊಳಗಿನ ಒಟ್ಟು 60 ಬಾಲಕರು ತರಬೇತಿಗೆ ಆಯ್ಕೆಯಾಗಿದ್ದಾರೆ. ವಲಯದ ಮಂಡ್ಯ, ಚಾಮರಾಜನಗರ, ಸುತ್ತೂರಿನಲ್ಲಿಯೂ ಶಿಬಿರಕ್ಕೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಕೆಎಸ್‌ಸಿಎ ಪ್ರಧಾನ ಕಾರ್ಯದರ್ಶಿ ಜಾವಗಲ್ ಶ್ರೀನಾಥ್, ವಲಯ ನಿಮಂತ್ರಕ ವಿಜಯಪ್ರಕಾಶ್, ವಲಯ ಚೇರಮನ್ ಅಶ್ವಿನಿ ರಂಜನ್ ಹಾಜರಿದ್ದರು.

ಹುಬ್ಬಳ್ಳಿಯ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಮಾಜಿ ಕ್ರಿಕೆಟಿಗ ಜಿ.ಆರ್.ವಿಶ್ವನಾಥ್ ಚಾಲನೆ ನೀಡಿದರು. ಧಾರವಾಡ ವಲಯ ನಿಯಂತ್ರಕ ಬಾಬಾ ಭೂಸದ್ ಹಾಜರಿದ್ದರು. ಶಿವಮೊಗ್ಗದ ಹೊರವಲಯದಲ್ಲಿರುವ ಜೆಎನ್‌ಎನ್‌ಸಿಇ ಕ್ರೀಡಾಂಗಣದಲ್ಲಿ ಮಾಜಿ ಕ್ರಿಕೆಟಿಗ ಸೈಯದ್ ಕೀರ್ಮಾನಿ ಶಿಬಿರಕ್ಕೆ ಚಾಲನೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.