ADVERTISEMENT

ಕ್ರೀಡಾ ಗ್ರಾಮದಲ್ಲಿ ಶೌಚಾಲಯ ಸಮಸ್ಯೆ

​ಪ್ರಜಾವಾಣಿ ವಾರ್ತೆ
Published 24 ಜುಲೈ 2012, 19:30 IST
Last Updated 24 ಜುಲೈ 2012, 19:30 IST
ಕ್ರೀಡಾ ಗ್ರಾಮದಲ್ಲಿ ಶೌಚಾಲಯ ಸಮಸ್ಯೆ
ಕ್ರೀಡಾ ಗ್ರಾಮದಲ್ಲಿ ಶೌಚಾಲಯ ಸಮಸ್ಯೆ   

ಲಂಡನ್ (ಪಿಟಿಐ): ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಸುಂದರವಾದ ಕ್ರೀಡಾ ಗ್ರಾಮ ನಿರ್ಮಾಣ ಮಾಡಲಾಗಿದೆ. ಆದರೆ, ಶೌಚಾಲಯ ಸಮಸ್ಯೆ ಇಲ್ಲಿ ಪ್ರಮುಖವಾಗಿ ಎದ್ದು ಕಾಣುತ್ತಿದೆ.

`ಒಂದು ಶೌಚಾಲಯವನ್ನು ದಿನನಿತ್ಯ ನಾಲ್ಕು ಮಂದಿ ಬಳಸುವ ಸ್ಥಿತಿ ಇದೆ. ಕೆಲವು ಸಲ ಈ ಸಂಖ್ಯೆ ಆರಕ್ಕೆ ಏರುತ್ತದೆ. ಅತಿ ದೊಡ್ಡ ಕ್ರೀಡಾಕೂಟದಲ್ಲಿ  ಈ ತರಹದ ಅವ್ಯವಸ್ಥೆ ಇರುವುದು ಸರಿಯಲ್ಲ~ ಎಂದು ಭಾರತದ ಕ್ರೀಡಾಳುಗಳ ಜೊತೆ ತೆರಳಿರುವ ಅಧಿಕಾರಿಯೊಬ್ಬರು ಹೇಳಿದ್ದಾರೆ.

`ಕ್ರೀಡಾಗ್ರಾಮದಲ್ಲಿ ಸರಿಯಾಗಿ ಶೌಚಾಲಯ ವ್ಯವಸ್ಥೆ ಮಾಡಿಲ್ಲ. ಸ್ಥಿತಿ ತೀರಾ ಗಂಭೀರವಾಗಿದೆ. ಇಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳಲು ಪ್ರಯಾಸವಾಗುತ್ತಿದೆ. ಆದ್ದರಿಂದ ಕೆಲ ಅಥ್ಲೀಟ್‌ಗಳು ಪದೇ ಪದೇ ಶೌಚಾಲಯಕ್ಕೆ ತೆರಳುತ್ತಾರೆ. ಲಂಡನ್‌ನಲ್ಲಿನ ಸ್ಥಿತಿಗೆ ಹೋಲಿಸಿದರೆ, ನವದೆಹಲಿಯಲ್ಲಿ ಕಾಮನ್‌ವೆಲ್ತ್ ಕ್ರೀಡಾಕೂಟದ ಕ್ರೀಡಾಗ್ರಾಮದ ವ್ಯವಸ್ಥೆ ಉತ್ತಮವಾಗಿತ್ತು~ ಎಂದು ಹೆಸರು ಹೇಳಲು ಬಯಸದ ಭಾರತದ ಬಾಕ್ಸರ್ ಒಬ್ಬರು ತಿಳಿಸಿದ್ದಾರೆ.

`ಸ್ಥಳೀಯ ಕಾಲಮಾನದ ಪ್ರಕಾರ ನಮ್ಮ ಹಾಕಿ ತಂಡದ ಪಂದ್ಯ ಬೆಳಿಗ್ಗೆ 8.30ಕ್ಕೆ ಒಲಿಂಪಿಕ್ ಪಾರ್ಕ್ ಅರೆನಾದಲ್ಲಿ ನಡೆಯಲಿದೆ. ಅದಕ್ಕಾಗಿ ನಾವು ಬೆಳಗಿನ ಜಾವ ಐದು ಗಂಟೆಗಾಗಲೇ ಕ್ರೀಡಾ ಗ್ರಾಮದಿಂದ ತೆರಳಬೇಕಾಗುತ್ತದೆ.
 
ಶೌಚಾಲಯ ಸಮಸ್ಯೆ ಹೇಳತೀರದು. ಹಾಗಾದರೆ ನಿತ್ಯದ ಕೆಲಸಗಳನ್ನು ಮುಗಿಸಿ ಸರಿಯಾದ ಸಮಯಕ್ಕೆ ಅಲ್ಲಿಗೆ ತೆರಳುವುದು ಹೇಗೆ. ಇಲ್ಲಿರುವ ಸ್ಥಿತಿಯನ್ನು ನೀವೆ ಊಹಿಸಿ~ ಎಂದು ಆಸ್ಟ್ರೇಲಿಯಾ ಹಾಕಿ ತಂಡದ ಕೋಚ್ ರಿಕ್ ಚಾರ್ಲ್ಸ್‌ವರ್ಥ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.