ದುಬೈ (ಐಎಎನ್‌ಎಸ್): ಭಾರತದ ಮಹೇಶ್ ಭೂಪತಿ ಹಾಗೂ ರೋಹನ್ ಬೋಪಣ್ಣ ಅವರು ಇಲ್ಲಿ ನಡೆಯುತ್ತಿರುವ ದುಬೈ ಟೆನಿಸ್ ಚಾಂಪಿಯನ್‌ಷಿಪ್‌ನ ಡಬಲ್ಸ್ ವಿಭಾಗದಲ್ಲಿ ಕ್ವಾರ್ಟರ್‌ಫೈನಲ್ ಪ್ರವೇಶಿಸಿದ್ದಾರೆ.
ಗುರುವಾರ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ಭಾರತದ ಜೋಡಿ 6-4, 7-5ರಲ್ಲಿ ಡಿ. ಲುಕಾಸ್ ಹಾಗೂ ಅಲೆಕ್ಸಾಂಡ್ರಾ ಡೊಗೊಪೊಲೊವ ಎದುರು ಗೆಲುವು ಸಾಧಿಸಿತು. 70 ನಿಮಿಷಗಳ ಕಾಲ ನಡೆದ ಹೋರಾಟದಲ್ಲಿ ಭೂಪತಿ-ಬೋಪಣ್ಣ ಎರಡೂ ಸೆಟ್‌ಗಳಲ್ಲಿ ಪ್ರಬಲ ಪೈಪೋಟಿ ಎದುರಿಸಿದರು. ಮುಂದಿನ ಸುತ್ತಿನಲ್ಲಿ ಆಸ್ಟ್ರೇಲಿಯಾದ ಪಾಲ್ ಹೆನ್ಲಿ- ಇಂಗ್ಲೆಂಡ್‌ನ ಜಾಮಿಯಾ ಮರ‌್ರೆ ಇವರಿಗೆ ಎದುರಾಳಿ.
ಭಾರತದ ಇನ್ನೊಬ್ಬ ಆಟಗಾರ ಲಿಯಾಂಡರ್ ಪೇಸ್ ಹಾಗೂ ಸರ್ಬಿಯಾದ ಜಾಂಕೊ ತಿಪ್ಸರೆವಿಕ್ ಜೋಡಿ ನಿರಾಸೆ ಅನುಭವಿಸಿತು. ಸ್ವೀಡನ್‌ನ ರಾಬೆರ್ಟ್ ಲಿಂಡ್‌ಸ್ಟಿಡ್-ರೂಮಿನಿಯಾದ ಹೊರಿಯಾ ತೇಚೊವಾ 6-4, 7-5ರಲ್ಲಿ `ಭಾರತ-ಸರ್ಬಿಯಾ~ ಜೋಡಿಯನ್ನು ಸೋಲಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.