ADVERTISEMENT

ಕ್ವಾರ್ಟರ್‌ ಫೈನಲ್‌ಗೆ ರೋಜರ್ ಫೆಡರರ್‌

ಸ್ಟಟ್‌ಗರ್ಟ್‌ ಕಪ್‌ ಟೆನಿಸ್‌ ಟೂರ್ನಿ

ಏಜೆನ್ಸೀಸ್
Published 13 ಜೂನ್ 2018, 19:33 IST
Last Updated 13 ಜೂನ್ 2018, 19:33 IST

ಸ್ಟಟ್‌ಗರ್ಟ್‌, ಜರ್ಮನಿ (ಎಎಫ್‌ಪಿ): ಸ್ವಿಟ್ಜರ್‌ಲೆಂಡ್‌ನ ಆಟಗಾರ ರೋಜರ್‌ ಫೆಡರರ್‌ ಅವರು, ಸ್ಟಟ್‌ಗರ್ಟ್‌ ಕಪ್‌ ಟೆನಿಸ್‌ ಟೂರ್ನಿಯಲ್ಲಿ ಬುಧವಾರ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ.

ಸೆಂಟರ್‌ ಕೋರ್ಟ್‌ನಲ್ಲಿ ಬುಧವಾರ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಪ್ರೀ ಕ್ವಾರ್ಟರ್‌ ಫೈನಲ್‌ ಹಣಾಹಣಿಯಲ್ಲಿ ಫೆಡರರ್‌ 3–6, 6–4, 6–2ರಲ್ಲಿ ಮಿಶಾ ಜ್ವೆರೆವ್‌ ಅವರನ್ನು ಸೋಲಿಸಿದರು.

ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ರೋಜರ್‌, ಮೊದಲ ಸೆಟ್‌ನಲ್ಲಿ ನಿರಾಸೆ ಕಂಡರು.

ADVERTISEMENT

ಇದರಿಂದ ಎದೆಗುಂದದ ಅವರು ಎರಡು ಮತ್ತು ಮೂರನೇ ಸೆಟ್‌ಗಳಲ್ಲಿ ಮಿಂಚಿನ ಆಟ ಆಡಿ ಎದುರಾಳಿಯ ಸವಾಲು ಮೀರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.