ADVERTISEMENT

ಗಂಗೋತ್ರಿಯಲ್ಲಿ ಕ್ರಿಕೆಟಿಗರ ಅಭ್ಯಾಸ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2013, 19:59 IST
Last Updated 23 ಸೆಪ್ಟೆಂಬರ್ 2013, 19:59 IST

ಮೈಸೂರು: ಗಂಗೋತ್ರಿ ಗ್ಲೇಡ್ಸ್‌ನಲ್ಲಿ ಸೋಮವಾರ ಬೆಳಿಗ್ಗೆಯಿಂದಲೇ ಕ್ರಿಕೆಟ್‌ ಪ್ರೇಮಿಗಳ ಮೊಬೈಲ್ ಫೋನ್ ಕ್ಯಾಮೆರಾಗಳ ಕಿಲಕಿಲ ಸದ್ದು!

ಸೆಪ್ಟೆಂಬರ್‌ 25 ರಿಂದ 28ರವರೆಗೆ ಇಲ್ಲಿಯ ಗಂಗೋತ್ರಿ ಗ್ಲೇಡ್ಸ್‌ನಲ್ಲಿ ನಡೆಯಲಿರುವ ‘ಎ‘ ಪಂದ್ಯದಲ್ಲಿ ಆಡಲಿರುವ ವೆಸ್ಟ್ ಇಂಡೀಸ್ ‘ಎ’ ತಂಡ ಮತ್ತು ಭಾರತ ‘ಎ’ ತಂಡಗಳ ಆಟ­ಗಾ­ರರ ಅಭ್ಯಾಸವನ್ನು ನೋಡಲು ಮಾನಸ­ಗಂಗೋತ್ರಿಯ ವಿದ್ಯಾರ್ಥಿಗಳ ದಂಡು ಸೇರಿತ್ತು.

ಬೆಳಿಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ ಅಭ್ಯಾಸ ನಡೆಸಿದ ಕಿರ್ಕ್ ಎಡ್ವರ್ಡ್ ಬಳಗವು ಬ್ಯಾಟಿಂಗ್‌, ಫಿಟ್ ನೆಸ್ ಮತ್ತು ಫೀಲ್ಡಿಂಗ್ ಅಭ್ಯಾಸ ನಡೆಸಿತು. ಕಿರನ್ ಪೋವೆಲ್ ಅವರು ಪ್ರೇಕ್ಷಕರ ಪ್ರಮುಖ ಆಕರ್ಷಣೆಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.