ಅಗಾದಿರ್, ಮೊರಕ್ಕೊ (ಪಿಟಿಐ): ಸುದೀರ್ಘ ಅವಧಿಯ ಬಿಡುವಿನ ಬಳಿಕ ‘ಲೇಡೀಸ್ ಯೂರೋಪಿಯನ್ ಗಾಲ್ಫ್ ಟೂರ್’ ನಲ್ಲಿ ಆಡಲಿಳಿದಿರುವ ಶರ್ಮಿಳಾ ನಿಕೋಲೆಟ್ ಪ್ರಭಾವಿ ಪ್ರದರ್ಶನ ನೀಡಿದ್ದಾರೆ.
ಮೊರಕ್ಕೊದಲ್ಲಿ ನಡೆಯುತ್ತಿರುವ ಲಲ್ಲಾ ಮರ್ಯಮ್ ಕಪ್ ಟೂರ್ನಿಯ ಮೊದಲ ಸುತ್ತಿನ ಬಳಿಕ ಬೆಂಗಳೂರಿನ ಆಟಗಾರ್ತಿ ಜಂಟಿ 16ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಶುಕ್ರವಾರ ನಡೆದ ಸ್ಪರ್ಧೆ ಕೊನೆಗೊಳಿಸಲು ಅವರು 70 ಅವಕಾಶಗಳನ್ನು ಬಳಸಿಕೊಂಡರು.
ಇಂಗ್ಲೆಂಡ್‌ನ ರೆಬೆಕಾ ಹಡ್ಸನ್ ಮತ್ತು ಸೋಫಿ ವಾಕರ್ (ತಲಾ 66) ಮೊದಲ ಸುತ್ತಿನ ಬಳಿಕ ಜಂಟಿ ಅಗ್ರಸ್ಥಾನದಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.