ಗುಡಗಾಂವ್ (ಐಎಎನ್‌ಎಸ್): ಬೆಂಗಳೂರಿನ ಎಸ್. ಚಿಕ್ಕರಂಗಪ್ಪ ಇಲ್ಲಿ ನಡೆಯುತ್ತಿರುವ ನಾರ್ದರ್ನ್ ಇಂಡಿಯಾ ಅಮೆಚೂರ್ ಗಾಲ್ಫ್ ಚಾಂಪಿಯನ್‌ಷಿಪ್‌ನ ಮೂರನೇ ಸುತ್ತಿನಲ್ಲಿ ಪ್ರಭಾವಿ ಪ್ರದರ್ಶನ ನೀಡಿ ಮುನ್ನಡೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಚಿಕ್ಕರಂಗಪ್ಪ ಗುರುವಾರ ಸ್ಪರ್ಧೆ ಕೊನೆಗೊಳಿಸಲು ಕೇವಲ 70 ಅವಕಾಶಗಳನ್ನು ಬಳಸಿಕೊಂಡರು. ಇದೀಗ ಅವರು ಒಟ್ಟಾರೆ 215 ಸ್ಟ್ರೋಕ್‌ಗಳೊಂದಿಗೆ ಎಲ್ಲರಿಗಿಂತ ಮುಂದಿದ್ದು, ಪ್ರಶಸ್ತಿಯತ್ತ ಹೆಜ್ಜೆಯಿಟ್ಟಿದ್ದಾರೆ.
ಸಯ್ಯದ್ ಸಕೀಬ್ ಅಹ್ಮದ್ ಮತ್ತು ಖಾಲಿನ್ ಜೋಷಿ (217) ಜಂಟಿ ಎರಡನೇ ಸ್ಥಾನದಲ್ಲಿದ್ದಾರೆ. ಇವರು ಮೂರನೇ ಸುತ್ತಿನಲ್ಲಿ ಕ್ರಮವಾಗಿ 70, 71 ಅವಕಾಶಗಳನ್ನು ಬಳಸಿಕೊಂಡರು. ಬುಧವಾರ ಅಗ್ರಸ್ಥಾನದಲ್ಲಿದ್ದ ತ್ರಿಶೂಲ್ ಚಿನ್ನಪ್ಪ (218) ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡರು. ತ್ರಿಶೂಲ್ ಮೂರನೇ ಸುತ್ತಿನಲ್ಲಿ (76) ನಿಖರ ಪ್ರದರ್ಶನ ನೀಡುವಲ್ಲಿ ವಿಫಲರಾದರು.
ಅಗ್ರ ನಾಲ್ಕು ಸ್ಥಾನಗಳಲ್ಲಿ ಬೆಂಗಳೂರಿನ ಸ್ಪರ್ಧಿಗಳು ಕಾಣಿಸಿಕೊಂಡಿರುವುದು ವಿಶೇಷ. ದೆಹಲಿಯ ಹನೆಯ್ ಬೈಸೋಯಾ (221) ಐದನೇ ಸ್ಥಾನದಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.