ADVERTISEMENT

ಗೆಲುವಿನ ವಿಶ್ವಾಸದಲ್ಲಿ ಭಾರತ

ಫುಟ್‌ಬಾಲ್‌: ಇಂದು ಸೌಹಾರ್ದ ಪಂದ್ಯ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2014, 19:30 IST
Last Updated 4 ಮಾರ್ಚ್ 2014, 19:30 IST

ಮಡಗಾಂವ್‌ (ಪಿಟಿಐ): ಭಾರತ ತಂಡ ಬುಧವಾರ ಇಲ್ಲಿನ ನೆಹರೂ ಕ್ರೀಡಾಂಗಣದಲ್ಲಿ ನಡೆಯುವ ಅಂತರರಾಷ್ಟ್ರೀಯ ಸೌಹಾರ್ದ ಪಂದ್ಯದಲ್ಲಿ ಬಾಂಗ್ಲಾದೇಶದ ಸವಾಲನ್ನು ಎದುರಿಸಲಿದೆ.

ಕಳೆದ ವರ್ಷ ನೇಪಾಳದಲ್ಲಿ ನಡೆದ ಸ್ಯಾಪ್‌ (ಎಸ್‌ಎಎಫ್‌ಎಫ್‌) ಕಪ್‌  ಚಾಂಪಿಯನ್‌ಷಿಪ್‌ನಲ್ಲಿ ಉಭಯ ತಂಡಗಳು ಎದುರಾಗಿದ್ದವು. ಈ ಪಂದ್ಯ 1–1ರಲ್ಲಿ ಡ್ರಾ ಕಂಡಿತ್ತು. ಇದಾದ ಬಳಿಕ ಎರಡೂ ತಂಡಗಳು ಮುಖಾಮುಖಿಯಾಗುತ್ತಿ ರುವುದು ಇದೇ ಮೊದಲು.
ನಾಯಕ ಸುನಿಲ್‌ ಚೆಟ್ರಿ, ಸುಬ್ರತಾ ಪಾಲ್‌, ಅರ್ಮಿಂಧರ್‌ ಸಿಂಗ್‌ ಸೇರಿದಂತೆ ಬಲಿಷ್ಠ ಆಟಗಾರರಿಂದ ಕೂಡಿರುವ ಭಾರತ ತಂಡ ಈ ಪಂದ್ಯದಲ್ಲಿ ಗೆಲುವು ಪಡೆಯುವ ಉತ್ಸಾಹದಲ್ಲಿದೆ.

ತಂಡದಲ್ಲಿ ಕೆಲ ಬದಲಾವಣೆ ಮಾಡಲಾಗಿದ್ದು, ಗೋಲ್‌ ಕೀಪರ್‌ಗಳಾದ ಸುಬ್ರತಾ ಪಾಲ್ ಮತ್ತು ಅರ್ಮಿಂಧರ್‌ ಸಿಂಗ್‌, ಡಿಫೆಂಡರ್, ಸಂದೇಶ್‌ ಜಿಂಗಾನ್‌, ಮಿಡ್‌ ಫೀಲ್ಡರ್‌ ಆಲ್ವಿನ್‌ ಜಾರ್ಜ್‌ ಹಾಗೂ ಸ್ಟ್ರೈಕರ್‌್ ಬಲವಂತ್‌ ಸಿಂಗ್‌ಗೆ ತಂಡದಲ್ಲಿ ಸ್ಥಾನ ನೀಡಲಾಗಿದೆ.
‘ನಾವು ಸ್ಯಾಪ್‌ ಕಪ್‌ ಚಾಂಪಿಯನ್‌ಷಿಪ್‌ನಲ್ಲಿ ಕಡೆಯದಾಗಿ ಬಾಂಗ್ಲಾ ಎದುರು ಆಡಿದ್ದೆವು. ಈ ಪಂದ್ಯ ರೋಮಾಂಚನಕಾರಿಯಾಗಿತ್ತು.

ಪಂದ್ಯದ ಅಂತಿಮ ಕ್ಷಣದಲ್ಲಿ ಚೆಟ್ರಿ ಗಳಿಸಿದ ಗೋಲಿನಿಂದಾಗಿ ನಾವು ಸಮಬಲ ಸಾಧಿಸಿ, ನಮ್ಮ ಎದುರು ಮೊದಲ ಗೆಲುವಿನ ಸಿಹಿ ಕಾಣ ಬೇಕೆಂದಿದ್ದ ಬಾಂಗ್ಲಾ ಕನಸಿಗೆ ತಣ್ಣೀರೆರೆಚಿದ್ದೆವು’ ಎಂದು ಕೋಚ್‌ ಕೋವರ್‌ಮನ್ಸ್‌್‌  ನೆನಪುಗಳನ್ನು ಮೆಲುಕು ಹಾಕಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.