ಮೀರ್‌ಪುರ (ಪಿಟಿಐ): ಕೊನೆಯ ಓವರ್‌ವರೆಗೂ ಕುತೂಹಲ ಕೆರಳಿಸಿದ ಪಂದ್ಯದಲ್ಲಿ ಭಾರತ ತಂಡ ಪಾಕಿಸ್ತಾನದ ಎದುರು ಒಂದು ವಿಕೆಟ್‌ನ ಸೋಲು ಅನುಭವಿಸಿತು.
ಷೇರ್ ಎ ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಏಷ್ಯಾಕಪ್ ಕ್ರಿಕೆಟ್ ಟೂರ್ನಿಯ ಮಹತ್ವದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ನಿಗದಿತ ಓವರ್‌ಗಳಲ್ಲಿ 8 ವಿಕೆಟ್‌ಗೆ 245 ರನ್ ಪೇರಿಸಿತು. ಪಾಕ್ ತಂಡ 49.4 ಓವರ್‌ಗಳಲ್ಲಿ 9 ವಿಕೆಟ್‌ಗೆ 249 ರನ್ ಗಳಿಸಿ ರೋಚಕ ಗೆಲುವು ಪಡೆಯಿತು.
ಪಾಕ್ ತಂಡದ ಗೆಲುವಿಗೆ ಅಂತಿಮ ಓವರ್‌ನಲ್ಲಿ 10 ರನ್‌ಗಳು ಬೇಕಿದ್ದವು. ಆರ್. ಅಶ್ವಿನ್ ಎಸೆದ ಓವರ್‌ನ ಮೂರು ಮತ್ತು ನಾಲ್ಕನೇ ಎಸೆತಗಳಲ್ಲಿ ಶಾಹಿದ್ ಅಫ್ರಿದಿ (34, 18 ಎಸೆತ) ಭರ್ಜರಿ ಸಿಕ್ಸರ್ ಸಿಡಿಸಿ ಪಾಕ್ ತಂಡದ ಗೆಲುವಿಗೆ ಕಾರಣರಾದರು.
ಅಮಿತ್ ಮಿಶ್ರಾ (28ಕ್ಕೆ 2) ಒಳಗೊಂಡಂತೆ ಭಾರತದ ಬೌಲರ್‌ಗಳು ಕೊನೆಯವರೆಗೂ ಪಾಕ್ ಬ್ಯಾಟ್ಸ್ಮನ್ಗಳ ಮೇಲೆ ಒತ್ತಡ ಹೇರಿದ್ದರು. ಆದರೆ, ಅಂತಿಮ ಓವರ್‌ನಲ್ಲಿ ಪಾಕ್ ತಂಡ ಗೆಲುವನ್ನು ಭಾರತದ ಕೈಯಿಂದ ಕಿತ್ತುಕೊಂಡಿತು.
ಸೋಲು ಅನುಭವಿಸಿದ ಕಾರಣ ವಿರಾಟ್ ಕೊಹ್ಲಿ ಬಳಗ ಫೈನಲ್ ಪ್ರವೇಶಿಸುವ ಸಾಧ್ಯತೆ ಕಡಿಮೆಯಾಗಿದೆ. ಪಾಕಿಸ್ತಾನ (9) ಮತ್ತು ಶ್ರೀಲಂಕಾ (8) ತಂಡಗಳು ಪಾಯಿಂಟ್ ಪಟ್ಟಿಯಲ್ಲಿ ಮೊದಲ ಎರಡು ಸ್ಥಾನಗಳಲ್ಲಿವೆ. ಮೂರು ಪಂದ್ಯಗಳಿಂದ ನಾಲ್ಕು ಪಾಯಿಂಟ್ ಹೊಂದಿರುವ ಭಾರತ ಮೂರನೇ ಸ್ಥಾನದಲ್ಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.