ADVERTISEMENT

ಚಂದ್ರಪಾಲ್‌ ವಿದಾಯ

​ಪ್ರಜಾವಾಣಿ ವಾರ್ತೆ
Published 23 ಜನವರಿ 2016, 19:56 IST
Last Updated 23 ಜನವರಿ 2016, 19:56 IST
ಶಿವನಾರಾಯಣ ಚಂದ್ರಪಾಲ್‌
ಶಿವನಾರಾಯಣ ಚಂದ್ರಪಾಲ್‌   

ಸೇಂಟ್‌ ಜಾನ್ಸ್‌, ಆ್ಯಂಟಿಗ ಮತ್ತು ಬಾರ್ಬುಡಾ (ಎಎಫ್‌ಪಿ): ವೆಸ್ಟ್‌ ಇಂಡೀಸ್‌ ತಂಡದ ಹಿರಿಯ ಆಟಗಾರ ಶಿವನಾರಾಯಣ ಚಂದ್ರಪಾಲ್‌ ಶನಿವಾರ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಇದರೊಂದಿಗೆ 22 ವರ್ಷದ ಕ್ರೀಡಾ ಬದುಕಿಗೆ ತೆರೆ ಎಳೆದಿದ್ದಾರೆ.

ವಿಂಡೀಸ್‌ ತಂಡದ ಮಾಜಿ ನಾಯಕರೂ ಆಗಿದ್ದ ಗಯಾನದ ಚಂದ್ರ ಪಾಲ್‌ ಟೆಸ್ಟ್‌ ಮಾದರಿಯಲ್ಲಿ  ಗರಿಷ್ಠ ರನ್‌ ಗಳಿಸಿದ ವಿಂಡೀಸ್‌ನ ಎರಡನೇ ಆಟ ಗಾರ ಎನಿಸಿದ್ದಾರೆ. ಚಂದ್ರಪಾಲ್‌ ಈ ಮಾದರಿಯಲ್ಲಿ 11,867ರನ್‌ ಪೇರಿಸಿ ದ್ದಾರೆ. ಲಾರಾ (11, 953) ಅವರ ದಾಖಲೆಯನ್ನು ಹಿಂದಿಕ್ಕಲು ಚಂದ್ರ ಪಾಲ್‌ಗೆ ಇನ್ನೂ ಕೇವಲ 86ರನ್‌ಗಳ ಅಗತ್ಯವಿತ್ತು.

ಆದರೆ ವಿಂಡೀಸ್‌ ಕ್ರಿಕೆಟ್‌ ಮಂಡಳಿ ಇತ್ತೀಚಿನ ಕೆಲ ಸರಣಿಗಳಲ್ಲಿ ತಂಡದಿಂದ ಕೈಬಿಟ್ಟಿದ್ದರಿಂದ ಅವರ ಈ ಕನಸು ಕೈಗೂಡಲಿಲ್ಲ.  1994ರ ಮಾರ್ಚ್‌ನಲ್ಲಿ ಗಯಾನ ದಲ್ಲಿ ನಡೆದಿದ್ದ ಇಂಗ್ಲೆಂಡ್‌ ವಿರುದ್ಧದ ಪಂದ್ಯದಲ್ಲಿ ಆಡುವ ಮೂಲಕ ಟೆಸ್ಟ್‌ ಮಾದರಿಗೆ ಪದಾರ್ಪಣೆ ಮಾಡಿದ್ದ ಎಡಗೈ ಬ್ಯಾಟ್ಸ್‌ಮನ್‌ ಚಂದ್ರಪಾಲ್‌ ಆ ಪಂದ್ಯದಲ್ಲಿ ಅರ್ಧಶತಕ ಗಳಿಸಿ ವಿಂಡೀಸ್‌ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿ ದ್ದರು. ಹೋದ ವರ್ಷದ ಮೇ ತಿಂಗಳಿ ನಲ್ಲಿ ಇಂಗ್ಲೆಂಡ್‌ ವಿರುದ್ಧ ನಡೆದ ಪಂದ್ಯ ಅವರ ಪಾಲಿಗೆ ಕೊನೆಯದ್ದಾಗಿತ್ತು.

41 ವರ್ಷದ ಚಂದ್ರಪಾಲ್‌ 2008ರಲ್ಲಿ ವಿಸ್ಡನ್‌ ವರ್ಷದ ಶ್ರೇಷ್ಠ ಆಟಗಾರ ಗೌರವಕ್ಕೂ ಭಾಜನರಾಗಿದ್ದರು. ಅಂತರರಾಷ್ಟ್ರೀಯ ಮಾದರಿಯಿಂದ ದೂರ ಸರಿದಿರುವ ಚಂದ್ರಪಾಲ್‌ ದೇಶಿಯ ಟೂರ್ನಿಗಳಲ್ಲಿ ಗಯಾನ ತಂಡದ ಪರ ಆಡಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.