ADVERTISEMENT

ಚರ್ಚಿಲ್‌ ಬ್ರದರ್ಸ್‌ಗೆ ಜಯ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2014, 19:30 IST
Last Updated 11 ಮಾರ್ಚ್ 2014, 19:30 IST

ಮಡಗಾಂವ್‌ (ಪಿಟಿಐ): ಕ್ರಿಸ್ಟಿಯಾನೊ ಲಗೋಸ್‌ ಅವರು ತಂದಿತ್ತ ಎರಡು ಗೋಲುಗಳ ನೆರವಿನಿಂದ ಚರ್ಚಿಲ್‌ ಬ್ರದರ್ಸ್‌ ತಂಡ ಇಲ್ಲಿ ನಡೆಯುತ್ತಿರುವ ಎಎಫ್‌ಸಿ ಕಪ್ ಫುಟ್‌ಬಾಲ್‌ ಟೂರ್ನಿ ಯ ಪಂದ್ಯದಲ್ಲಿ 3–0 ಗೋಲುಗಳಿಂದ ಮಾಲ್ಡೀವ್ಸ್‌ನ ನ್ಯೂ ರೇಡಿಯಂಟ್‌ ತಂಡವನ್ನು ಮಣಿಸಿದ್ದಾರೆ.

ಫಟೊರ್ಡದಲ್ಲಿರುವ ನೆಹರೂ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಈ ಪಂದ್ಯದಲ್ಲಿ ವಿಜಯೀ ತಂಡದ ಲಗೋಸ್‌ 31 ಹಾಗೂ 75ನೇ ನಿಮಿಷದಲ್ಲಿ ಗೋಲು ಗಳಿಸಿದರು. ವಾಲ್ಫೆ 51ನೇ ನಿಮಿಷದಲ್ಲಿ ಚೆಂಡನ್ನು ಗುರಿ ಸೇರಿಸಿದರು. ಈ ಟೂರ್ನಿಯಲ್ಲಿ ಚರ್ಚಿಲ್‌ ಬ್ರದರ್ಸ್‌ಗೆ ಲಭಿಸಿದ ಮೊದಲ ಗೆಲುವು ಇದು. ಈ ತಂಡದ ವರು ಮೊದಲ ಪಂದ್ಯದಲ್ಲಿ ಇಂಡೊ ನೇಷ್ಯಾದ ಪೆರ್ಸಿಪುರ ಜಯಪುರ ಎದುರು ಸೋಲು ಕಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.