ADVERTISEMENT

ಚಿನ್ನಕ್ಕೆ ಗುರಿಯಿಟ್ಟ ಜಿತು–ಹೀನಾ

ವಿಶ್ವಕಪ್ ಶೂಟಿಂಗ್‌ ಚಾಂಪಿಯನ್‌ಷಿಪ್‌

ಪಿಟಿಐ
Published 12 ಜೂನ್ 2017, 19:30 IST
Last Updated 12 ಜೂನ್ 2017, 19:30 IST
ಹೀನಾ ಸಿಧು (ಎಡ) ಮತ್ತು ಜಿತು ರಾಯ್‌
ಹೀನಾ ಸಿಧು (ಎಡ) ಮತ್ತು ಜಿತು ರಾಯ್‌   

ಗಬಾಲ, ಅಜರ್‌ಬೈಜಾನ್‌:   ಭಾರತದ ಜಿತು ರಾಯ್‌ ಮತ್ತು ಹೀನಾ ಸಿಧು ಇಲ್ಲಿ ನಡೆದ ಐಎಸ್‌ಎಸ್‌ಎಫ್‌ ವಿಶ್ವಕಪ್‌ ಶೂಟಿಂಗ್‌ ಚಾಂಪಿಯನ್‌ ಷಿಪ್‌ನಲ್ಲಿ   ಚಿನ್ನಕ್ಕೆ ಕೊರಳೊಡ್ಡಿದ್ದಾರೆ.

ಸೋಮವಾರ ನಡೆದ 10ಮೀ ಏರ್‌ಪಿಸ್ತೂಲ್‌ ಮಿಶ್ರ ತಂಡ ವಿಭಾಗದ ಫೈನಲ್‌ನಲ್ಲಿ ಭಾರತದ ಜಿತು ಹಾಗೂ ಹೀನಾ 7–6ರಲ್ಲಿ ರಷ್ಯಾದ ಜೋಡಿ ಯನ್ನು ಮಣಿಸಿತು. ಕಂಚಿನ ಪದಕಕ್ಕಾಗಿ ನಡೆದ ಪ್ಲೇ ಆಫ್‌ನಲ್ಲಿ ಫ್ರಾನ್ಸ್ ತಂಡ ಇರಾನ್ ಎದುರು ಗೆದ್ದಿತು.

ದೆಹಲಿಯಲ್ಲಿ ನಡೆದ ವಿಶ್ವಕಪ್‌ ನಲ್ಲಿಯೂ ಈ ಜೋಡಿ ಮಿಶ್ರ ತಂಡ ವಿಭಾಗದಲ್ಲಿಯೇ ಚಿನ್ನ ಜಯಿಸಿತ್ತು. ಆದರೆ ಪದಕಗಳ ಪಟ್ಟಿಯಲ್ಲಿ ಈ ವಿಭಾಗವನ್ನು ಸೇರಿಸಲಾಗಿಲ್ಲ. ಚೀನಾ ಈ ವಿಶ್ವಕಪ್‌ನಲ್ಲಿ ಮೂರು ಚಿನ್ನ ಗೆದ್ದು ಮೊದಲ ಸ್ಥಾನದಲ್ಲಿದೆ.

ADVERTISEMENT

ಭಾನುವಾರ ನಡೆದ 10ಮೀ ವೈಯಕ್ತಿಕ ರೈಫಲ್ ವಿಭಾಗಗಳ ಅರ್ಹತಾ ಸುತ್ತಿನಲ್ಲಿ ಜಿತು ಮತ್ತು ಹೀನಾ ಕ್ರಮವಾಗಿ 12 ಮತ್ತು 9ನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದರು. ಮೊದಲ ಎಂಟು ಸ್ಪರ್ಧಿಗಳು ಮಾತ್ರ ಫೈನಲ್ ತಲುಪಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.