ADVERTISEMENT

ಚಿನ್ನ ಗೆದ್ದು ಬೀಗಿದ ಭಾರತದ ಬಾಕ್ಸರ್‌ಗಳು

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2018, 19:44 IST
Last Updated 27 ಏಪ್ರಿಲ್ 2018, 19:44 IST

ಬ್ಯಾಂಕಾಕ್‌ (ಪಿಟಿಐ): ಏಷ್ಯನ್‌ ಯೂತ್‌ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ಮಹಿಳಾ ಬಾಕ್ಸರ್‌ಗಳು ಶುಕ್ರ ವಾರ ಮೂರು ಚಿನ್ನದ ಪದಕಗಳನ್ನು ಗೆದ್ದಿದ್ದಾರೆ.

48 ಕೆ.ಜಿ. ವಿಭಾಗದಲ್ಲಿ ನೀತು ಗಂಗಾಸ್‌, 64 ಕೆ.ಜಿ. ವಿಭಾಗದಲ್ಲಿ ಮನಿಷಾ ಹಾಗೂ 69 ಕೆ.ಜಿ. ವಿಭಾಗದಲ್ಲಿ ಲಲಿತಾ ಚಿನ್ನಕ್ಕೆ ಕೊರಳೊಡ್ಡಿ ಅಕ್ಟೋಬರ್‌ನಲ್ಲಿ ನಡೆಯುವ ಯೂತ್‌ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿದ್ದಾರೆ.

ನೀತು ಅವರು ಬಲಿಷ್ಠ ಪಂಚ್‌ಗಳ ಮೂಲಕ ಮಿಲ್ಲಾದ್‌ ಮಿಕೋನ್‌ ಅವರನ್ನು ಕಟ್ಟಿಹಾಕಿ ಸಂಭ್ರ ಮಿಸಿದರು. ಪಂದ್ಯದ ಆರಂಭದಿಂದಲೂ ಬಿರುಸಿನ ಪಂಚ್‌ಗಳ ಮೂಲಕ ಮೇಲುಗೈ ಸಾಧಿಸಿದ ಮನಿಶಾ, 3–2 ಪಾಯಿಂಟ್ಸ್‌ಗಳಿಂದ ತಜಿಕಿಸ್ತಾನದ ಇದಿಮೊಖ್‌ ಖೊಲೊವಾ ಅವರನ್ನು ಮಣಿಸಿದರು.

ADVERTISEMENT

ರಕ್ಷಣಾ ಆಟಕ್ಕೆ ಹೆಚ್ಚು ಒತ್ತು ಕೊಟ್ಟ ಲಲಿತಾ ಅವರು ಕಜಕಿಸ್ತಾನದ ಬಿಸೆಬಯೆವಾ ಮೈಯಾ ಅವರನ್ನು ಸೋಲಿಸಿದರು.  51 ಕೆ.ಜಿ. ವಿಭಾಗದಲ್ಲಿ ಅನಾಮಿಕಾ ಹಾಗೂ 81 ಕೆ.ಜಿ. ವಿಭಾಗದಲ್ಲಿ ಸಾಕ್ಷಿ ಅವರು ಬೆಳ್ಳಿ ಪದಕಗಳನ್ನು ಜಯಿಸಿದ್ದಾರೆ.

ಪುರುಷರ 60 ಕೆ.ಜಿ. ವಿಭಾಗದಲ್ಲಿ ಅಂಕಿತ್‌ ಖತಾನಾ ಅವರು ಬೆಳ್ಳಿ ಸಾಧನೆ ಮಾಡಿದ್ದಾರೆ. 52 ಕೆ.ಜಿ. ವಿಭಾಗದಲ್ಲಿ ಭಾವೇಶ್‌ ಕಟ್ಟಿಮನಿ, 91 ಕೆ.ಜಿ. ವಿಭಾಗದಲ್ಲಿ ಅಮನ್‌ ಅವರು ಕಂಚಿನ ಪದಕಗಳನ್ನು ಜಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.