ADVERTISEMENT

ಚೀನಾಗೆ ಆಘಾತ ನೀಡಿದ ಥಾಯ್ಲೆಂಡ್‌

ಏಜೆನ್ಸೀಸ್
Published 25 ಮೇ 2018, 19:30 IST
Last Updated 25 ಮೇ 2018, 19:30 IST

ಬ್ಯಾಂಕಾಕ್‌ (ಎಎಫ್‌ಪಿ): ಥಾಯ್ಲೆಂಡ್‌ನ ಮಹಿಳಾ ತಂಡದವರು ಶುಕ್ರವಾರ ಬ್ಯಾಡ್ಮಿಂಟನ್‌ ಲೋಕದಲ್ಲಿ ಹೊಸ ಮೈಲುಗಲ್ಲು ಸ್ಥಾಪಿಸಿದರು.

ಈ ತಂಡ ಉಬರ್‌ ಕಪ್‌ ಟೂರ್ನಿಯಲ್ಲಿ ಮೊದಲ ಸಲ ಫೈನಲ್‌ ಪ್ರವೇಶಿಸಿದ ಹೆಗ್ಗಳಿಕೆ ತನ್ನದಾಗಿಸಿಕೊಂಡಿತು.

ಸೆಮಿಫೈನಲ್‌ ಹಣಾಹಣಿಯಲ್ಲಿ ಥಾಯ್ಲೆಂಡ್‌ ವನಿತೆಯರು 3–2ರಿಂದ ಬಲಿಷ್ಠ ಚೀನಾ ತಂಡಕ್ಕೆ ಆಘಾತ ನೀಡಿದರು.

ADVERTISEMENT

ಶನಿವಾರ ನಡೆಯುವ ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ಥಾಯ್ಲೆಂಡ್‌ ತಂಡ ಜಪಾನ್‌ ವಿರುದ್ಧ ಸೆಣಸಲಿದೆ.

ನಾಲ್ಕರ ಘಟ್ಟದ ಇನ್ನೊಂದು ಪೈಪೋಟಿಯಲ್ಲಿ ಜಪಾನ್‌ 3–1ರಿಂದ ದಕ್ಷಿಣ ಕೊರಿಯಾ ತಂಡವನ್ನು ಸೋಲಿಸಿತು.

ಮೊದಲ ಸಿಂಗಲ್ಸ್‌ನಲ್ಲಿ ರಚನೊಕ್‌ ಇಂಟಾನನ್‌ 15–21, 21–9, 21–14ರಲ್ಲಿ ಚೆನ್‌ ಯೂಫಿ ವಿರುದ್ಧ ಗೆದ್ದರು.

ಮೊದಲ ಡಬಲ್ಸ್‌ನಲ್ಲಿ ಮಿಂಚಿದ ಚೀನಾ ತಂಡ 1–1ರ ಸಮಬಲ ಮಾಡಿಕೊಂಡಿತು.

ಎರಡನೇ ಸಿಂಗಲ್ಸ್‌ನಲ್ಲಿ ಥಾಯ್ಲೆಂಡ್‌ನ ನಿಚಾವೊನ್‌ ಜಿಂದಾಪೊಲ್‌ ಅವರು ಗಾವೊ ಫಾಂಗ್‌ಜೀ ವಿರುದ್ಧ ಗೆದ್ದು 2–1ರ ಮುನ್ನಡೆಗೆ ಕಾರಣರಾದರು.

ಎರಡನೇ ಡಬಲ್ಸ್‌ನಲ್ಲೂ ಚೀನಾ ತಂಡ ಪ್ರಾಬಲ್ಯ ಮೆರೆಯಿತು. ಹೀಗಾಗಿ 2–2ರ ಸಮಬಲ ಕಂಡುಬಂತು.

ನಿರ್ಣಾಯಕ ಎನಿಸಿದ್ದ ಮೂರನೇ ಸಿಂಗಲ್ಸ್‌ನಲ್ಲಿ ಬುಸಾನನ್‌ ಒಂಗ್‌ಬಮ್ರುಂಗ್‌ಫಾನ್‌ 21–11, 21–9ರಲ್ಲಿ ಲೀ ಕ್ಸುಯೆರುಯಿ ಅವರನ್ನು ಸೋಲಿಸಿ ಥಾಯ್ಲೆಂಡ್‌ ಸಂಭ್ರಮಕ್ಕೆ ಕಾರಣರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.