ADVERTISEMENT

ಚೀನಾ ಓಪನ್ ಟೆನಿಸ್: ಅಜರೆಂಕಾ ಚಾಂಪಿಯನ್:ನೊವಾಕ್ ಜೊಕೊವಿಚ್‌ಗೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2012, 19:30 IST
Last Updated 7 ಅಕ್ಟೋಬರ್ 2012, 19:30 IST
ಚೀನಾ ಓಪನ್ ಟೆನಿಸ್: ಅಜರೆಂಕಾ ಚಾಂಪಿಯನ್:ನೊವಾಕ್ ಜೊಕೊವಿಚ್‌ಗೆ ಪ್ರಶಸ್ತಿ
ಚೀನಾ ಓಪನ್ ಟೆನಿಸ್: ಅಜರೆಂಕಾ ಚಾಂಪಿಯನ್:ನೊವಾಕ್ ಜೊಕೊವಿಚ್‌ಗೆ ಪ್ರಶಸ್ತಿ   

ಬೀಜಿಂಗ್ (ಐಎಎನ್‌ಎಸ್): ಸರ್ಬಿಯದ ನೊವಾಕ್ ಜೊಕೊವಿಚ್ ಇಲ್ಲಿ ಕೊನೆಗೊಂಡ ಚೀನಾ ಓಪನ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಚಾಂಪಿಯನ್ ಆದರು.ಭಾನುವಾರ ನಡೆದ ಫೈನಲ್‌ನಲ್ಲಿ ವಿಶ್ವದ ಎರಡನೇ ರ‌್ಯಾಂಕ್‌ನ ಆಟಗಾರ ಜೊಕೊವಿಚ್ 7-6, 6-2 ರಲ್ಲಿ ಫ್ರಾನ್ಸ್‌ನ ಜೋ ವಿಲ್ಫ್ರೆಡ್ ಸೋಂಗಾ ಅವರನ್ನು ಮಣಿಸಿದರು. ಸರ್ಬಿಯದ ಆಟಗಾರನಿಗೆ ಇಲ್ಲಿ ದೊರೆತ ಮೂರನೇ ಪ್ರಶಸ್ತಿ ಇದು.

ಅವರು ಈ ಮೊದಲು 2009 ಮತ್ತು 2010 ರಲ್ಲಿ ಕಿರೀಟ ಮುಡಿಗೇರಿಸಿಕೊಂಡಿದ್ದರು. `ಮುಂದಿನ ವರ್ಷವೂ ಇಲ್ಲಿ ಆಡುವುದು ನನ್ನ ಉದ್ದೇಶ~ ಎಂದು ಜೊಕೊವಿಕ್ ನುಡಿದಿದ್ದಾರೆ. ಫೈನಲ್ ಪಂದ್ಯದ ಮೊದಲ ಸೆಟ್‌ನಲ್ಲಿ ಮಾತ್ರ ಪೈಪೋಟಿ ಕಂಡುಬಂತು. ಅಂತಿಮವಾಗಿ ಟೈಬ್ರೇಕರ್‌ನಲ್ಲಿ 7-4 ರಲ್ಲಿ ಗೆಲುವು ಪಡೆದ ಜೊಕೊವಿಚ್ ಸೆಟ್ ತಮ್ಮದಾಗಿಸಿಕೊಂಡರು. ಎರಡನೇ ಸೆಟ್‌ನಲ್ಲಿ ಸೋಂಗಾ ಎದುರಾಳಿಗೆ ಸುಲಭದಲ್ಲಿ ಶರಣಾದರು.

ಆಟಕ್ಕೂ ಸೈ ನೃತ್ಯಕ್ಕೂ ಜೈ... ಚೀನಾ ಓಪನ್ ಟೆನಿಸ್ ಟೂರ್ನಿಯ ಸಿಂಗಲ್ಸ್‌ನಲ್ಲಿ ಚಾಂಪಿಯನ್ ಆದ ಸರ್ಬಿಯದ ನೊವಾಕ್ ಜೊಕೊವಿಚ್ (ಮುಂದಿನ ಸಾಲು) ಪ್ರಶಸ್ತಿ ಸ್ವೀಕರಿಸಿದ ನಂತರ ನೃತ್ಯ ಮಾಡಿದ ರೀತಿ  -ಎಪಿ ಚಿತ್ರ



ಅಜರೆಂಕಾ ಚಾಂಪಿಯನ್: ಬೆಲಾರಸ್‌ನ ವಿಕ್ಟೋರಿಯಾ ಅಜರೆಂಕಾ ಇದೇ ಟೂರ್ನಿಯ ಮಹಿಳೆಯರ ಸಿಂಗಲ್ಸ್ ವಿಭಾಗದ ಪ್ರಶಸ್ತಿ ತಮ್ಮದಾಗಿಸಿಕೊಂಡರು. ಫೈನಲ್‌ನಲ್ಲಿ ಅವರು 6-3, 6-1 ರಲ್ಲಿ ರಷ್ಯಾದ ಮರಿಯಾ ಶರ್ಪೋವಾ ಎದುರು ಸುಲಭ ಗೆಲುವು ಪಡೆದರು.

ನಿಶಿಕೊರಿಗೆ ಪ್ರಶಸ್ತಿ (ಟೋಕಿಯೊ ವರದಿ): ಜಪಾನ್‌ನ ಕೀ ನಿಶಿಕೊರಿ ಭಾನುವಾರ ಕೊನೆಗೊಂಡ ಜಪಾನ್ ಓಪನ್ ಟೆನಿಸ್ ಟೂರ್ನಿಯ ಸಿಂಗಲ್ಸ್ ವಿಭಾಗದ ಪ್ರಶಸ್ತಿ ಜಯಿಸಿದರು. ಫೈನಲ್‌ನಲ್ಲಿ ಅವರು 7-6, 3-6, 6-0 ರಲ್ಲಿ ಕೆನಡಾದ ಮಿಲೋಸ್ ರಾವೊನಿಕ್ ಎದುರು ಗೆದ್ದರು. ಜಪಾನ್ ಓಪನ್ ಟೂರ್ನಿ ಗೆದ್ದ ಜಪಾನ್‌ನ ಮೊದಲ ಆಟಗಾರ ಎಂಬ ಗೌರವ ನಿಶಿಕೊರಿ ತಮ್ಮದಾಗಿಸಿಕೊಂಡರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT