ADVERTISEMENT

ಚೆಸ್: ಡ್ರಾ ಪಂದ್ಯದಲ್ಲಿ ವಿಶ್ವನಾಥನ್ ಆನಂದ್

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2013, 19:59 IST
Last Updated 23 ಏಪ್ರಿಲ್ 2013, 19:59 IST
ಪ್ಯಾರಿಸ್‌ನಲ್ಲಿ ನಡೆಯುತ್ತಿರುವ `ಅಲೆಖೈನ್ ಮೆಮೋರಿಯಲ್ ಚೆಸ್ ಟೂರ್ನಿ'ಯ ಎರಡನೇ ಸುತ್ತಿನ ಡ್ರಾ ಪಂದ್ಯದಲ್ಲಿ ಭಾರತದ ವಿಶ್ವನಾಥನ್ ಆನಂದ್ ಮತ್ತು ರಷ್ಯಾದ ನಿಕಿತಾ ವಿತುಯಿಗೋವ್ ಆಟದಲ್ಲಿ ತಲ್ಲೆನರಾಗಿದ್ದ ಸಂದರ್ಭ 	-ಎಎಫ್‌ಪಿ ಚಿತ್ರ
ಪ್ಯಾರಿಸ್‌ನಲ್ಲಿ ನಡೆಯುತ್ತಿರುವ `ಅಲೆಖೈನ್ ಮೆಮೋರಿಯಲ್ ಚೆಸ್ ಟೂರ್ನಿ'ಯ ಎರಡನೇ ಸುತ್ತಿನ ಡ್ರಾ ಪಂದ್ಯದಲ್ಲಿ ಭಾರತದ ವಿಶ್ವನಾಥನ್ ಆನಂದ್ ಮತ್ತು ರಷ್ಯಾದ ನಿಕಿತಾ ವಿತುಯಿಗೋವ್ ಆಟದಲ್ಲಿ ತಲ್ಲೆನರಾಗಿದ್ದ ಸಂದರ್ಭ -ಎಎಫ್‌ಪಿ ಚಿತ್ರ   

ಪ್ಯಾರಿಸ್ (ಪಿಟಿಐ): ವಿಶ್ವ ಚಾಂಪಿಯನ್ ಭಾರತದ ವಿಶ್ವನಾಥನ್ ಆನಂದ್ ಇಲ್ಲಿ ನಡೆಯುತ್ತಿರುವ `ಅಲೆಖೈನ್ ಮೆಮೋರಿಯಲ್ ಚೆಸ್ ಟೂರ್ನಿ'ಯ ಎರಡನೇ ಸುತ್ತಿನ ಪಂದ್ಯದಲ್ಲಿ ರಷ್ಯಾದ ನಿಕಿತಾ ವಿತುಯಿಗೋವ್ ವಿರುದ್ಧ ಡ್ರಾ ಸಾಧಿಸಿದರು.

ಮಂಗಳವಾರ ನಡೆದ ಪಂದ್ಯ 40 ನಡೆಗಳಲ್ಲಿ ಅಂತ್ಯವಾಯಿತು. ಸೋಮವಾರ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ಆನಂದ್, ಇಂಗ್ಲೆಂಡ್‌ನ ಮೈಕೆಲ್ ಆಡಮ್ಸ ವಿರುದ್ಧ ಸೋಲು ಕಂಡಿದ್ದರು.

ಇದೇವೇಳೆ, ಆಡಮ್ಸ ತಮ್ಮ ಗೆಲುವಿನ ಅಭಿಯಾನ ಮುಂದುವರಿಸಿದ್ದಾರೆ. ತಮ್ಮ ಎರಡನೇ ಪಂದ್ಯದಲ್ಲಿ ಅವರು ರಷ್ಯಾದ ಪೀಟರ್ ಸ್ವಿಡ್ಲರ್ ವಿರುದ್ಧ ಜಯ ಕಂಡರು.

ಮತ್ತೊಂದು ಪಂದ್ಯದಲ್ಲಿ ಫ್ರಾನ್ಸ್‌ನ ಮಾಕ್ಸಿಮ್ ವಷೀರ್ ಲಾಗ್ರೇವ್ ಚೀನಾದ ಡಿಂಗ್ ಲಿರೆನ್ ವಿರುದ್ಧ ಗೆಲುವು ಕಂಡರು. ಅಂತೆಯೇ ರಷ್ಯಾದ ವ್ಲಾದಿಮಿರ್ ಕ್ರಾಮ್ನಿಕ್ ವಿರುದ್ಧ ಅರ್ಮೇನಿಯಾದ ಲೆವೋನ್ ಅರೋನಿಯನ್ ಜಯ ದಾಖಲಿಸಿದರು.
ಫ್ರಾನ್ಸ್‌ನ ಲಾರೆಟ್ ಫ್ರೆಸ್ಸಿನೆಟ್ ಮತ್ತು ಇಸ್ರೇಲ್‌ನ ಬೋರಿಸ್ ಗೆಲ್‌ಫಾಂಡ್ ನಡುವಿನ ಪಂದ್ಯ ಡ್ರಾಗೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.