ADVERTISEMENT

ಚೆಸ್: ಮೈಸೂರಿನ ಮಾನಸ ಚಾಂಪಿಯನ್

​ಪ್ರಜಾವಾಣಿ ವಾರ್ತೆ
Published 14 ಜುಲೈ 2013, 19:59 IST
Last Updated 14 ಜುಲೈ 2013, 19:59 IST
ಮೈಸೂರಿನಲ್ಲಿ ಭಾನುವಾರ ಮುಕ್ತಾಯವಾದ ರಾಜ್ಯ ಮಹಿಳಾ ಚೆಸ್ ಟೂರ್ನಿಯಲ್ಲಿ ಮೊದಲ ನಾಲ್ಕು ಸ್ಥಾನ ಗೆದ್ದು ರಾಷ್ಟ್ರೀಯ ಮಹಿಳಾ ಚೆಸ್ ಟೂರ್ನಿಗೆ ಆಯ್ಕೆಯಾದವರು (ಎಡದಿಂದ ಬಲಕ್ಕೆ); ಎಂ. ತುಳಸಿ, ಕೆ.ಮಾನಸ, ಎಚ್.ಆರ್. ಮಾನಸ, ಜೆ. ಜೀವಿತಾ.
ಮೈಸೂರಿನಲ್ಲಿ ಭಾನುವಾರ ಮುಕ್ತಾಯವಾದ ರಾಜ್ಯ ಮಹಿಳಾ ಚೆಸ್ ಟೂರ್ನಿಯಲ್ಲಿ ಮೊದಲ ನಾಲ್ಕು ಸ್ಥಾನ ಗೆದ್ದು ರಾಷ್ಟ್ರೀಯ ಮಹಿಳಾ ಚೆಸ್ ಟೂರ್ನಿಗೆ ಆಯ್ಕೆಯಾದವರು (ಎಡದಿಂದ ಬಲಕ್ಕೆ); ಎಂ. ತುಳಸಿ, ಕೆ.ಮಾನಸ, ಎಚ್.ಆರ್. ಮಾನಸ, ಜೆ. ಜೀವಿತಾ.   

ಮೈಸೂರು: ಆತಿಥೇಯ ಮೈಸೂರಿನ ಎಚ್.ಆರ್. ಮಾನಸ ಕರ್ನಾಟಕ ರಾಜ್ಯ ಚೆಸ್ ಸಂಸ್ಥೆಯ ಮೈಸೂರು ವಿಭಾಗದ ಆಶ್ರಯದಲ್ಲಿ ನಡೆದ ಮಹಿಳಾ ಚೆಸ್ ಚಾಂಪಿಯನ್‌ಷಿಪ್‌ನಲ್ಲಿ ಭಾನುವಾರ ಚಾಂಪಿಯನ್ ಆಗಿ ಹೊರಹೊಮ್ಮಿದರು.

ಕಾವೇರಿ ಶಾಲೆಯಲ್ಲಿ ನಡೆದ ಟೂರ್ನಿಯ ಏಳು ಸುತ್ತುಗಳಲ್ಲಿ ಆರೂವರೆ (6.5) ಅಂಕಗಳನ್ನು  ಗಳಿಸಿಕೊಂಡ ಮೈಸೂರಿನ ಹುಡುಗಿ, ಆರು ಅಂಕ ಗಳಿಸಿದ ಮಂಗಳೂರಿನ ಕೆ. ಮಾನಸ ಅವರನ್ನು ಹಿಂದಿಕ್ಕಿದರು. 14 ವರ್ಷದ ಎಚ್.ಆರ್. ಮಾನಸ ಐದನೇ ಸುತ್ತಿನಲ್ಲಿ ಕೆ. ಮಾನಸ ವಿರುದ್ಧದ ಪಂದ್ಯವನ್ನು ಡ್ರಾ ಮಾಡಿಕೊಂಡಿದ್ದರು. ಅಂತಿಮ ಸುತ್ತಿನಲ್ಲಿ ಮೈಸೂರಿನವರೇ ಆದ ಬಿ.ಎನ್. ಗಂಗಮ್ಮ ಅವರನ್ನು ಮಣಿಸಿ ವಿಜಯದತ್ತ ಸಾಗಿದರು.
ಈ ವರ್ಷ 19 ವರ್ಷದೊಳಗಿನ ಬಾಲಕಿಯರ ರಾಜ್ಯ ಚಾಂಪಿಯನ್‌ಷಿಪ್‌ನಲ್ಲೂ ಮಾನಸ ಗೆದ್ದಿದ್ದರು.

ಈ ಟೂರ್ನಿಯಲ್ಲಿ ಮೊದಲ ನಾಲ್ಕು ಸ್ಥಾನ ಪಡೆದ ಎಚ್. ಆರ್. ಮಾನಸ, ಕೆ. ಮಾನಸ, ಎಂ. ತುಳಸಿ ಮತ್ತು ಜೆ. ಜೀವಿತಾ ಅವರು ಜುಲೈ 25ರಂದು ತಿರುಚ್ಚಿಯಲ್ಲಿ ನಡೆಯಲಿರುವ ರಾಷ್ಟ್ರೀಯ ಮಹಿಳಾ ಚೆಸ್ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಲು ಅರ್ಹತೆ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.