ADVERTISEMENT

ಚೆಸ್: ವಿಶ್ವನಾಥನ್ ಆನಂದ್‌ಗೆ ಜಯ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2011, 19:30 IST
Last Updated 24 ಮಾರ್ಚ್ 2011, 19:30 IST

ಮೊನಾಕೊ (ಪಿಟಿಐ): ವಿಶ್ವನಾಥನ್ ಆನಂದ್ ಅವರು ಇಲ್ಲಿ ನಡೆಯುತ್ತಿರುವ ಅಂಬರ್ ಬ್ಲೈಂಡ್‌ಫೋಲ್ಡ್ ಚೆಸ್ ಟೂರ್ನಿಯ 10ನೇ ಸುತ್ತಿನ ಪಂದ್ಯದಲ್ಲಿ ಅಜರ್‌ಬೈಜಾನ್‌ನ ವ್ಯಗಾರ್ ಗಾಶಿಮೋವ್ ವಿರುದ್ಧ ಜಯ ಸಾಧಿಸಿದರು.ಗುರುವಾರ ನಡೆದ ಪಂದ್ಯದಲ್ಲಿ ಭಾರತದ ಗ್ರ್ಯಾಂಡ್‌ಮಾಸ್ಟರ್ 1.5-0.5 ಪಾಯಿಂಟ್‌ಗಳಿಂದ ಗೆಲುವು ಪಡೆದರು. ಇದೀಗ ಆನಂದ್ ಒಟ್ಟು 11 ಪಾಯಿಂಟ್‌ಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ. 
 

ಟೂರ್ನಿಯಲ್ಲಿ ಇನ್ನು ಒಂದು ಸುತ್ತಿನ ಪಂದ್ಯ ಮಾತ್ರ ಬಾಕಿಯುಳಿದಿದ್ದು, ಆನಂದ್ ಅವರು ಪ್ರಶಸ್ತಿ ಗೆಲ್ಲುವ ಅವಕಾಶ ಕಳೆದುಕೊಂಡಿದ್ದಾರೆ. ಅರ್ಮೇನಿಯದ ಲೆವೊನ್ ಅರೋನಿಯನ್ ಅವರು 14.5 ಪಾಯಿಂಟ್‌ಗಳೊಂದಿಗೆ ಅಗ್ರಸ್ಥಾನಲ್ಲಿದ್ದು,  ಪ್ರಶಸ್ತಿಯನ್ನು ಹೆಚ್ಚು ಕಡಿಮೆ ಖಚಿತಪಡಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT