ನವದೆಹಲಿ: ‘ಲೀಗ್ ಆರಂಭಕ್ಕೂ ಮೊದಲು ಸಾಕಷ್ಟು ಜನರ ಎದುರು ಕಬಡ್ಡಿ ಆಡಿದ ಅನುಭವ ಇರಲಿಲ್ಲ. ಲೀಗ್ ಬಂದ ಬಳಿಕ ಪಂದ್ಯಗಳು ವಾಹಿನಿ ಯಲ್ಲಿ ನೇರ ಪ್ರಸಾರವಾಗುತ್ತಿವೆ. ಕ್ರೀಡಾಂ ಗಣದಲ್ಲಿ ಅಭಿಮಾನಿಗಳು ಮೇಲಿಂದ ಮೇಲೆ ನನ್ನ ಹೆಸರನ್ನು ಕೂಗಿ ಬೆಂಬಲಿ ಸುವ ರೀತಿ ನನ್ನಲ್ಲಿ ಆಡುವ ಉತ್ಸಾಹ ವನ್ನು ಇಮ್ಮಡಿಸಿದೆ’ ಎಂದು ದಬಾಂಗ್ ಡೆಲ್ಲಿ ತಂಡದ ನಾಯಕ ಕಾಶಿಲಿಂಗ್ ಅಡಕೆ ಹೇಳಿದರು.
ಲೀಗ್ ಆರಂಭವಾಗಲು ಒಂದು ವಾರ ಬಾಕಿ ಇರುವ ಕಾರಣ ಸಂಘಟ ಕರು ಪತ್ರಿಕಾಗೋಷ್ಠಿ ಆಯೋಜಿಸಿದ್ದರು. ಆಗ ಕಾಶಿಲಿಂಗ್ ಮಾತನಾಡಿದರು. ಪ್ರಮುಖ ರೈಡರ್ ಆಗಿರುವ ಅವರು 2015ರ ಆವೃತ್ತಿಯಲ್ಲಿ ರೈಡಿಂಗ್ ಮೂಲಕ 114 ಪಾಯಿಂಟ್ಸ್ ಕಲೆ ಹಾಕಿದ್ದರು.
‘ನನ್ನ ತಂದೆ ಕುಸ್ತಿಪಟುವಾಗಿದ್ದ ಕಾರಣ ಮನೆಯಲ್ಲಿ ಕ್ರೀಡೆಗೆ ಪ್ರೋತ್ಸಾಹ ವಿತ್ತು. ಆದರೆ ಕುಸ್ತಿಯಲ್ಲಿ ಆಸಕ್ತಿ ಇರಲಿಲ್ಲ. ಆದ್ದರಿಂದ ಗೆಳೆಯರ ಜೊತೆ ಬೀದಿಗಳಲ್ಲಿ ಕಬಡ್ಡಿ ಆಡುತ್ತಿದ್ದೆ. ಕಾಲಕಳೆದಂತೆಲ್ಲಾ ವೃತ್ತಿಪರ ಆಟಗಾರನಾಗಿ ಬದಲಾದೆ’ ಎಂದು ಅಡಕೆ ಹಿಂದಿನ ದಿನಗಳನ್ನು ನೆನಪಿಸಿಕೊಂಡರು.
ಕಾಲೆಳೆದ ಬಚ್ಚನ್: ‘ಕಾಶಿಲಿಂಗ್ ಶ್ರೇಷ್ಠ ರೈಡರ್ ಎಂಬುದು ಎಲ್ಲರಿಗೂ ಗೊತ್ತು. ಆಟದ ಚುರುಕುತನ ಮತ್ತು ವೇಗ ಮೆಚ್ಚು ವಂಥದ್ದು. ಆದರೆ ಅವರು ನಮ್ಮ ತಂಡದ ಎದುರು ಎಲ್ಲಾ ಶಕ್ತಿಯನ್ನು ತೋರಿಸು ವುದು ಬೇಡ’ ಎಂದು ಜೈಪುರ ಪಿಂಕ್ ಪ್ಯಾಂಥರ್ಸ್ ತಂಡದ ಮಾಲೀಕ ಅಭಿ ಷೇಕ್ ಬಚ್ಚನ್ ಹೇಳಿದಾಗ ಪತ್ರಿಕಾ ಗೋಷ್ಠಿಯಲ್ಲಿ ನಗೆಯ ಅಲೆ ಎದ್ದಿತು.
ರಾಯಭಾರಿ: ಕಬಡ್ಡಿ ಲೀಗ್ ಮೂರನೇ ಆವೃತ್ತಿಗೆ ನಟ ರಾಣಾ ದಗ್ಗುಬಾಟಿ ರಾಯಭಾರಿಯಾಗಿ ನೇಮಕವಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.