ಹಕೆನ್‌ಹಿಮ್, ಜರ್ಮನಿ (ಎಎಫ್‌ಪಿ): ಫೆರಾರಿ ತಂಡದ ಫೆರ್ನಾಂಡೊ ಅಲೊನ್ಸೊ ಭಾನುವಾರ ನಡೆದ ಜರ್ಮನ್ ಗ್ರ್ಯಾನ್ ಪ್ರಿ ಫಾರ್ಮುಲಾ ಒನ್ ರೇಸ್‌ನಲ್ಲಿ ಅಗ್ರಸ್ಥಾನ ಪಡೆದರು.
`ಪೋಲ್ ಪೊಸಿಷನ್~ನಿಂದ ಸ್ಪರ್ಧೆ ಆರಂಭಿಸಿದ್ದ ಅಲೊನ್ಸೊ ಅದ್ಭುತ ಚಾಲನಾ ಕೌಶಲ ಮೆರೆದರು. ರೆಡ್‌ಬುಲ್ ತಂಡದ ಸೆಬಾಸ್ಟಿಯನ್ ವೆಟೆಲ್ ಎರಡನೇ ಸ್ಥಾನ ಪಡೆದರೆ, ಮೆಕ್‌ಲಾರೆನ್ ತಂಡದ ಜೆನ್ಸನ್ ಬಟನ್ ಮೂರನೇ ಸ್ಥಾನ ಪಡೆದರು.
ಫೋರ್ಸ್ ಇಂಡಿಯಾ ತಂಡದ ಚಾಲಕ ನಿಕೊ ಹಕೆನ್‌ಬರ್ಗ್ 9ನೇ ಸ್ಥಾನ ಪಡೆದು ಎರಡು ಪಾಯಿಂಟ್ ಗಿಟ್ಟಿಸಿಕೊಂಡರು. ಇನ್ನೊಬ್ಬ ಚಾಲಕ ಪೌಲ್ ಡಿ ರೆಸ್ಟಾ 11ನೇ ಸ್ಥಾನ ಪಡೆದು ಪಾಯಿಂಟ್ ಗಿಟ್ಟಿಸಲು ವಿಫಲರಾದರು. ಹಕೆನ್‌ಬರ್ಗ್ 4ನೆಯವರಾಗಿ ಸ್ಪರ್ಧೆ ಆರಂಭಿಸಿದ್ದರು. ಆದರೆ ಅವರಿಗೆ ಉತ್ತಮ ಪ್ರದರ್ಶನ ನೀಡಲು ಆಗಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.