ADVERTISEMENT

ಜಿಮ್ನಾಸ್ಟ್‌ಗಳ ಸುರಕ್ಷೆಗೆ ಮಾರ್ಗಸೂಚಿ

ಅಮೆರಿಕಾದಲ್ಲಿ ನಡೆದ ದೌರ್ಜನ್ಯ ಪ್ರಕರಣದ ನಂತರ ಎಚ್ಚೆತ್ತುಕೊಂಡ ಆಸ್ಟ್ರೇಲಿಯಾದಲ್ಲಿ ಆಡಳಿತ

ಏಜೆನ್ಸೀಸ್
Published 24 ಏಪ್ರಿಲ್ 2018, 18:45 IST
Last Updated 24 ಏಪ್ರಿಲ್ 2018, 18:45 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಸಿಡ್ನಿ : ಅಮೆರಿಕದಲ್ಲಿ ಜಿಮ್ನಾಸ್ಟ್‌ಗಳ ಮೇಲೆ ಕ್ರೀಡಾ ವೈದ್ಯ ಲಾರಿ ನಾಸರ್‌ ನಡೆಸಿದ ಲೈಂಗಿನ ದೌರ್ಜನ್ಯ ಪ್ರಕರಣ ಆಸ್ಟ್ರೇಲಿಯಾ ಜಿಮ್ನಾಸ್ಟಿಕ್ ಸಂಸ್ಥೆಯ ಮೇಲೆ ಪರಿಣಾಮ ಬೀರಿದ್ದು ಕಿರಿಯ ಜಿಮ್ನಾಸ್ಟ್‌ಗಳ ಸುರಕ್ಷೆಗೆ ಮಾರ್ಗಸೂಚಿಗಳನ್ನು ಸಿದ್ಧಗೊಳಿಸಲಾಗಿದೆ.

‘ದೇಶದಲ್ಲಿ‌ರುವ ಕ್ರೀಡಾಪಟುಗಳ ಪೈಕಿ ಹೆಚ್ಚಿನವರು 12 ವರ್ಷದ ಒಳಗಿನವರು. ಅವರ ಸುರಕ್ಷತೆಗೆ ಆದ್ಯತೆ ನೀಡಬೇಕಾದುದು ಅಗತ್ಯ ಎಂಬುದನ್ನು ಮನಗಂಡು ಮಾರ್ಗಸೂಚಿಗಳನ್ನು ಸಿದ್ಧಗೊಳಿಸಲಾಗಿದೆ.

ಈಗ ಜಾರಿಯಲ್ಲಿರುವ ರಾಷ್ಟ್ರೀಯ ಮಕ್ಕಳ ಸುರಕ್ಷಾ ಕ್ರಮಗಳಿಗೆ ‍ಪೂರಕವಾಗಿ ಇದು ಕಾರ್ಯನಿರ್ವಹಿಸಲಿದೆ’ ಎಂದು ‘ಜಿಮ್ನಾಸ್ಟಿಕ್ಸ್‌ ಆಸ್ಟ್ರೇಲಿಯಾ’ದ ಮುಖ್ಯಸ್ಥ ಕಿಟ್ಟಿ ಚಿಲ್ಲರ್‌ ತಿಳಿಸಿದ್ದಾರೆ.

ADVERTISEMENT

ಮಾರ್ಗಸೂಚಿಗಳನ್ನು ಜಾರಿ ಗೊಳಿಸಲು ಫೋಬ್‌ ಪೌನಾಲ್ ಅವರನ್ನು ಸಂಚಾಲಕರನ್ನಾಗಿ ನೇಮಕ ಮಾಡಲಾಗಿದೆ.

‘ಸಮಾಜಕ್ಕೆ ಇನ್ನೂ ಕೂಡ ದೌರ್ಜನ್ಯದ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ಹೀಗಾಗಿ ಜನರ ಕಣ್ಣು ತೆರೆಸುವ ಕಾರ್ಯ ಆಗಬೇಕು ಎಂಬುದು ನಮ್ಮ ಉದ್ದೇಶ’ ಎಂದು ಪೌನಾಲ್ ಹೇಳಿದರು.

‘ನಮ್ಮಲ್ಲಿ ಮಕ್ಕಳ ಮೇಲೆ ದೌರ್ಜನ್ಯ ಪ್ರಕರಣಗಳು ನಡೆದಿಲ್ಲ. ಆದರೂ ಅಮೆರಿಕದ ಲ್ಯಾರಿ ನಾಸರ್ ಅವರ ಪ್ರಕರಣದ ನಂತರ ತರಬೇತಿ ಮತ್ತು ಇತರ ಸಂದರ್ಭದಲ್ಲಿ ಮಕ್ಕಳ ಸುರಕ್ಷತೆ ಮೇಲೆ ಹೆಚ್ಚು ನಿಗಾ ವಹಿಸಲಾಗುತ್ತಿದೆ’ ಎಂದು ಅವರು ಹೇಳಿದರು.

ಎರಡು ದಶಕಗಳ ಕಾಲ ಸುಮಾರು 260 ಮಂದಿ ಕ್ರೀಡಾಪಟುಗಳ ಮೇಲೆ ಅತ್ಯಾಚಾರ ನಡೆಸಿದ ಆರೋಪ ಲ್ಯಾರಿ ನಾಸರ್ ಮೇಲೆ ಇದೆ. ಅವರಿಗೆ 175 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.