ADVERTISEMENT

ಜೊಕೊವಿಚ್ ಮುಡಿಗೆ ಕಿರೀಟ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2013, 19:48 IST
Last Updated 21 ಏಪ್ರಿಲ್ 2013, 19:48 IST
ಪ್ರಶಸ್ತಿ ಗೆದ್ದ ಖುಷಿಯಲ್ಲಿ ನೊವಾಕ್ ಜೊಕೊವಿಚ್
ಪ್ರಶಸ್ತಿ ಗೆದ್ದ ಖುಷಿಯಲ್ಲಿ ನೊವಾಕ್ ಜೊಕೊವಿಚ್   

ಮಾಂಟೆ ಕಾರ್ಲೋ (ರಾಯಿಟರ್ಸ್‌): ವಿಶ್ವದ ಅಗ್ರ ಶ್ರೇಯಾಂಕದ ಆಟಗಾರ ಸರ್ಬಿಯಾದ ನೊವಾಕ್ ಜೊಕೊವಿಚ್ ಇಲ್ಲಿ ನಡೆದ ಮಾಂಟೆ ಕಾರ್ಲೋ  ಮಾಸ್ಟರ್ಸ್ ಟೆನಿಸ್ ಟೂರ್ನಿಯ ಸಿಂಗಲ್ಸ್‌ನ ಫೈನಲ್ ಹಣಾಹಣಿಯಲ್ಲಿ 6-2, 7-6ರ ನೇರ ಸೆಟ್‌ಗಳಿಂದ ರಫೆಲ್ ನಡಾಲ್ ಅವರನ್ನು ಸೋಲಿಸುವ ಮೂಲಕ ಅಪ್ರತಿಮ ಸಾಧನೆಯೊಂದಕ್ಕೆ ಕಾರಣರಾದರು.

ಎಂಟು ವರ್ಷಗಳ ಅವಧಿಯಲ್ಲಿ ಈ ಟೂರ್ನಿಯಲ್ಲಿ ನಡಾಲ್ ಪಂದ್ಯದಲ್ಲಿ ಸೋಲು ಕಂಡಿದ್ದು ಇದೇ ಮೊದಲು. ಹಿಂದಿನ ಒಟ್ಟು 46 ಪಂದ್ಯಗಳಲ್ಲಿಯೂ ಸ್ಪೇನ್‌ನ ಆಟಗಾರ ಸತತ ಗೆಲುವು ಪಡೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.