ನವದೆಹಲಿ: ಟೇಬಲ್ ಟೆನಿಸ್ ಕ್ರೀಡೆಗೆ ಭಾರತವು ಶಕ್ತಿಕೇಂದ್ರವಾಗುವ ಅವಕಾಶವಿದೆ ಎಂದು ಭಾರತ ಟಿಟಿ ತಂಡದ ಹಿಂದಿನ ಕೋಚ್ ಪೀಟರ್ ಎಂಗೆಲ್ ಹೇಳಿದ್ದಾರೆ.
ಅಲ್ಟಿಮೇಟ್ ಟೇಬಲ್ ಟೆನಿಸ್ (ಯುಟಿಟಿ) ಟೂರ್ನಿಯಲ್ಲಿ ಆಡುತ್ತಿರುವ ಆರ್‌ಪಿಎಸ್‌ಜಿ ಮೆವರಿಕ್ಸ್ ತಂಡಕ್ಕೆ ಪೀಟರ್ ಕೋಚ್ ಆಗಿದ್ದಾರೆ. ಶುಕ್ರವಾರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ‘ಯುಟಿಟಿಯು ವಿಶ್ವದರ್ಜೆಯ ಟೂರ್ನಿಯಾಗಿದೆ’ ಎಂದು ಅವರು ಅಭಿಪ್ರಾಯಪಟ್ಟರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.