ಮೈಸೂರು: ಬೆಂಗಳೂರಿನ ಸತ್ಯನಾರಾಯಣ ಅವರು ಭಾನುವಾರ ಪೇರೆಂಟ್ಸ್ ಟೇಬಲ್ ಟೆನಿಸ್ ಅಕಾಡೆಮಿಯ ಆಶ್ರಯದಲ್ಲಿ ಮುಕ್ತಾಯವಾದ ರಾಜ್ಯ ರ‌್ಯಾಂಕಿಂಗ್ ವೆಟರನ್ಸ್ ಟೇಬಲ್ ಟೆನಿಸ್ ಟೂರ್ನಿಯ 70 ವರ್ಷ ಮೇಲ್ಪಟ್ಟವರ ವಿಭಾಗದ ಪ್ರಶಸ್ತಿಯನ್ನು ಗೆದ್ದುಕೊಂಡರು.
ಫೈನಲ್ ಪಂದ್ಯದಲ್ಲಿ ಸತ್ಯನಾರಾಯಣ 11-9, 11-8, 8-11, 11-6ರಿಂದ ಮೈಸೂರಿನ ಕೆ.ವಿ. ಕೃಷ್ಣಮೂರ್ತಿ ಅವರ ವಿರುದ್ಧ ಜಯಿಸಿದರು.
ಉದಯಶಂಕರಗೆ ಪ್ರಶಸ್ತಿ: ಬೆಂಗಳೂರಿನ ಕೆ.ಎ. ಉದಯಶಂಕರ 60ವರ್ಷ ಮೇಲ್ಪಟ್ಟವರ ವಿಭಾಗದ ಫೈನಲ್‌ನಲ್ಲಿ 7-11, 11-7, 11-3, 11-4ರಿಂದ ಎಸ್‌ಕೆ. ಬಾಲಕೃಷ್ಣ ವಿರುದ್ಧ ಗೆದ್ದು ಪ್ರಶಸ್ತಿ ಗಳಿಸಿದರು.
ಕೃಷ್ಣಮೂರ್ತಿಗೆ ಜಯ: ನೈಋತ್ಯ ರೈಲ್ವೆಯ ಯು. ಕೃಷ್ಣಮೂರ್ತಿ 40 ವರ್ಷ ಮೇಲ್ಪಟ್ಟವರ ಫೈನಲ್‌ನಲ್ಲಿ 11-3, 11-4, 11-5ರಿಂದ ಬಿಎನ್‌ಎಂನ ಡಿ.ಪಿ. ಗೋಪಿನಾಥ್ ವಿರುದ್ಧ ಗೆದ್ದರು.
ಭಾವನಾಗೆ ಪ್ರಶಸ್ತಿ: ಬಿಎನ್‌ಎಂನ ಭಾವನಾ ಹರ್ನೆ ಮಹಿಳೆಯರ ವಿಭಾಗದ ಪ್ರಶಸ್ತಿ ಗೆದ್ದರು. ಫೈನಲ್ ಪಂದ್ಯದಲ್ಲಿ ಭಾವನಾ 11-6, 8-11, 11-9, 11-4ರಿಂದ ಬಿಎನ್‌ಎಂನ ಲಲಿತಾಕುಮಾರ ಅವರನ್ನು ಸೋಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.