ADVERTISEMENT

ಟೆನಿಸ್‌: ಅಂಕಿತಾಗೆ ನಿರಾಸೆ

ಪಿಟಿಐ
Published 15 ಜೂನ್ 2017, 19:30 IST
Last Updated 15 ಜೂನ್ 2017, 19:30 IST
ಟೆನಿಸ್‌: ಅಂಕಿತಾಗೆ ನಿರಾಸೆ
ಟೆನಿಸ್‌: ಅಂಕಿತಾಗೆ ನಿರಾಸೆ   

ಮ್ಯಾಂಚೆಸ್ಟರ್‌ : ಭಾರತದ ಪ್ರಮುಖ ಆಟಗಾರ್ತಿ ಅಂಕಿತಾ ರೈನಾ ಅವರು ಇಲ್ಲಿ ನಡೆಯುತ್ತಿರುವ ಐಟಿಎಫ್‌ ಮಹಿಳಾ ಟೆನಿಸ್‌ ಟೂರ್ನಿಯ ಸಿಂಗಲ್ಸ್‌ ಮತ್ತು ಡಬಲ್ಸ್‌ ವಿಭಾಗದ ಪಂದ್ಯಗಳಲ್ಲಿ ನಿರಾಸೆ ಕಂಡಿದ್ದಾರೆ.

ಗುರುವಾರ ನಡೆದ ಸಿಂಗಲ್ಸ್‌ ವಿಭಾಗದ ಪಂದ್ಯದಲ್ಲಿ ಅಂಕಿತಾ 3–6, 4–6ರ ನೇರ ಸೆಟ್‌ಗಳಿಂದ ಆರನೇ ಶ್ರೇಯಾಂಕಿತೆ ನವೊಮಿ ಬ್ರಾಡಿ ವಿರುದ್ಧ ಶರಣಾದರು.

ವಿಶ್ವ ಕ್ರಮಾಂಕ ಪಟ್ಟಿಯಲ್ಲಿ 273ನೇ ಸ್ಥಾನದಲ್ಲಿರುವ ಅಂಕಿತಾ ಮೊದಲ ಸೆಟ್‌ನ ಶುರುವಿನಲ್ಲಿ ಎದುರಾಳಿಗೆ ಪ್ರಬಲ ಪೈಪೋಟಿ ನೀಡಿದರು. ಹೀಗಾಗಿ ಮೊದಲ ಆರು ಗೇಮ್‌ಗಳ ಆಟ ಮುಗಿ ದಾಗ 3–3ರಲ್ಲಿ ಸಮಬಲ ಕಂಡುಬಂತು.

ADVERTISEMENT

ಆ ನಂತರ ಬ್ರಿಟನ್‌ನ ಆಟಗಾರ್ತಿ ನವೊಮಿ ಅವರ ಆಟ ಕಳೆಗಟ್ಟಿತು. ಮನಮೋಹಕ ಸರ್ವ್‌ ಹಾಗೂ ಚುರುಕಿನ ಡ್ರಾಪ್‌ಗಳ ಮೂಲಕ ಗೇಮ್‌ ಬೇಟೆ ಯಾಡಿದ ಅವರು ಸುಲಭವಾಗಿ ಗೆಲುವು ಒಲಿಸಿಕೊಂಡರು.

ವಿಶ್ವ ಕ್ರಮಾಂಕಪಟ್ಟಿಯಲ್ಲಿ 115ನೇ ಸ್ಥಾನ ಹೊಂದಿರುವ ನವೊಮಿ ಎರಡನೇ ಸೆಟ್‌ನ ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಮುಂದಾದರು. ಇನ್ನೊಂದೆಡೆ ಅಂಕಿತಾ ಕೂಡ ದಿಟ್ಟ ಹೋರಾಟ ನಡೆಸಿ ಗಮನಸೆಳೆದರು. ಹೀಗಾಗಿ 4–4ರಲ್ಲಿ ಸಮಬಲ ಕಂಡುಬಂತು. ಆ ನಂತರ ಬ್ರಿಟನ್‌ನ ಆಟಗಾರ್ತಿ ಚುರುಕಿನ ಆಟ ಆಡಿದರಲ್ಲದೇ ಒಂಬತ್ತು ಮತ್ತು ಹತ್ತನೇ ಗೇಮ್‌ಗಳಲ್ಲಿ ಭಾರತದ ಆಟಗಾರ್ತಿಯ ಸವಾಲು ಮೀರಿನಿಂತು ಸಂಭ್ರಮಿಸಿದರು.

ಡಬಲ್ಸ್‌ ವಿಭಾಗದಲ್ಲೂ ನಿರಾಸೆ: ಮಹಿಳೆಯರ ಡಬಲ್ಸ್‌ ವಿಭಾಗದಲ್ಲಿ ಬ್ರಿಟನ್‌ನ ಎಮಿಲಿ ವೆಬ್ಲಿ ಸ್ಮಿತ್‌ ಜೊತೆಗೂಡಿ ಆಡಿದ ಅಂಕಿತಾ ಅವರು ಮೊದಲ ಸುತ್ತಿನಲ್ಲಿ ಸೋಲು ಕಂಡರು. ಅಂಕಿತಾ ಮತ್ತು ಎಮಿಲಿ 4–6, 6–4, 5–10ರಲ್ಲಿ ಜಪಾನ್‌ನ ಅಕಿಕೊ ಇಮಾಯೆ ಮತ್ತು ಬೆಲ್ಜಿಯಂನ ಮರೀನಾ ಜಾನೆ ವಾಸ್ಕಾ ವಿರುದ್ಧ ಪರಾ ಭವಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.