ADVERTISEMENT

ಟೆನಿಸ್: ಪ್ರಜ್ವಲ್, ಹರೀಶ್‌ಸಿಂಗ್‌ಗೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2012, 22:00 IST
Last Updated 7 ಡಿಸೆಂಬರ್ 2012, 22:00 IST
ಮೈಸೂರು ಟೆನಿಸ್ ಕ್ಲಬ್‌ನಲ್ಲಿ ನಡೆದ ಟೆನಿಸ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದವರು; (ಎಡದಿಂದ ಬಲಕ್ಕೆ), ಹರ್ಷಾ ಸಾಯಿಚಲ್ಲಾ (ಆಂಧ್ರಪ್ರದೇಶ-18ವರ್ಷದೊಳಗಿನ ಬಾಲಕಿಯರ ವಿಭಾಗ), ಎಸ್. ಸೋಹಾ (ಕರ್ನಾಟಕ-16 ವರ್ಷದೊಳಗಿನ ಬಾಲಕಿಯರು), ಮಹೇಶ್ ಬತೀಜಾ (ಕರ್ನಾಟಕ -ಬಾಲಕರ ಡಬಲ್ಸ್), ಎಸ್.ಡಿ. ಪ್ರಜ್ವಲ್‌ದೇವ್ (ಕರ್ನಾಟಕ- 18 ವರ್ಷದೊಳಗಿನವರ ಸಿಂಗಲ್ಸ್/ಡಬಲ್ಸ್ ಪ್ರಶಸ್ತಿ), ಹರೀಶ್ ಸಿಂಗ್ (ಕರ್ನಾಟಕ -16ವರ್ಷದೊಳಗಿನ ಬಾಲಕರು)

ಮೈಸೂರು: ಮೈಸೂರಿನ ಹುಡುಗ ಎಸ್.ಡಿ. ಪ್ರಜ್ವಲ್‌ದೇವ್ ಮತ್ತು ಕರ್ನಾಟಕದ ಹರೀಶ್ ಸಿಂಗ್ ಶುಕ್ರವಾರ ಮೈಸೂರು ಟೆನಿಸ್ ಕ್ಲಬ್‌ನಲ್ಲಿ ಮುಕ್ತಾಯವಾದ `ಎಂಟಿಸಿ ಕಪ್-2012' ಎಐಟಿಎ ಟ್ಯಾಲೆಂಟ್ ಸೀರೀಸ್ ಟೆನಿಸ್ ಟೂರ್ನಿಯಲ್ಲಿ ಕ್ರಮವಾಗಿ 18 ವರ್ಷದ ಬಾಲಕರ ಮತ್ತು 16 ವರ್ಷದ ಬಾಲಕರ ವಿಭಾಗದ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡರು.

18 ವರ್ಷದೊಳಗಿನ ಬಾಲಕರ ವಿಭಾಗದ ಅಗ್ರಶ್ರೇಯಾಂಕದ ಆಟಗಾರ ಎಸ್.ಡಿ. ಪ್ರಜ್ವಲ್‌ದೇವ್ 7-5, 6-3ರಿಂದ ತಮಿಳುನಾಡಿನ ಗಣೇಶ್ ಶ್ರೀನಿವಾಸನ್ ವಿರುದ್ಧ ಗೆದ್ದರು. 18 ವರ್ಷದ ಬಾಲಕಿಯರ ವಿಭಾಗದಲ್ಲಿ ಆಂಧ್ರಪ್ರದೇಶದ ಹರ್ಷಾ ಸಾಯಿಚಲ್ಲಾ ಭರ್ಜರಿ ಪ್ರದರ್ಶನ ನೀಡುವ ಮೂಲಕ ಪ್ರಶಸ್ತಿ ಗೆದ್ದರು. ಫೈನಲ್‌ನಲ್ಲಿ ಐದನೇ ಶ್ರೇಯಾಂಕದ ಹರ್ಷಾ ಸಾಯಿಚಲ್ಲಾ 6-3, 1-6, 6-2ರಿಂದ ಮೂರನೇ ಶ್ರೇಯಾಂಕದ ಆಟಗಾರ್ತಿ, ಕರ್ನಾಟಕದ ಅಭಿಲಾಷಾ ವಿಶ್ವನಾಥನ್ ಅವರನ್ನು ಸೋಲಿಸಿದರು.

ಹರೀಶ್‌ಸಿಂಗ್, ಸೋಹಾ,  ಪ್ರಶಸ್ತಿ: ಕರ್ನಾಟಕದ ಶ್ರೇಯಾಂಕರಹಿತ ಆಟಗಾರ ಹರೀಶ್ ಸಿಂಗ್ ಮತ್ತು ಎಸ್. ಸೋಹಾ ಕ್ರಮವಾಗಿ  16 ವರ್ಷದೊಳಗಿನ ಬಾಲಕರ ಮತ್ತು ಬಾಲಕಿಯರ ವಿಭಾಗದಲ್ಲಿ ಚಾಂಪಿಯನ್ ಆದರು. ಹರೀಶ್‌ಫೈನಲ್‌ನಲ್ಲಿ  ಪಿ.ಸಿ. ಅನಿರುದ್ಧ್ ಅವರಿಗೆ ಆಘಾತ ನೀಡಿದರು.

ಪ್ರಶಸ್ತಿ ಗೆದ್ದರು.
ಉತ್ತಮ ಆಟ ಪ್ರದರ್ಶಿಸಿದ ಹರೀಶಸಿಂಗ್ 6-4, 6-4ರ ನೇರ ಸೆಟ್‌ಗಳಲ್ಲಿ ಅನಿರುದ್ಧ ಅವರನ್ನು ಪರಾಭವಗೊಳಿಸಿದರು.ಇದೇ ವಯೋಮಿತಿಯ ಬಾಲಕಿಯರ ವಿಭಾಗದಲ್ಲಿ ಅಗ್ರಶ್ರೇಯಾಂಕದ ಆಟಗಾರ್ತಿ ಕರ್ನಾಟಕದ ಎಸ್. ಸೋಹಾ ನಿರೀಕ್ಷೆಯಂತೆ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ಸೋಹಾ  7-6(1), 6-1ರಿಂದ ಆಂಧ್ರಪ್ರದೇಶದ ಹರ್ಷಾ ಸಾಯಿಚಲ್ಲಾ ಅವರನ್ನು ಸವಾಲನ್ನು ಮೆಟ್ಟಿನಿಂತರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT