ADVERTISEMENT

ಟೆನಿಸ್: ಫೈನಲ್‌ಗೆ ದಿವಿಜ್‌, ಪುರವ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2014, 19:08 IST
Last Updated 7 ಮಾರ್ಚ್ 2014, 19:08 IST

ಕ್ಯೂಟೊ,ಜಪಾನ್‌ (ಪಿಟಿಐ):  ದಿವಿಜ್‌ ಶರಣ್ ಮತ್ತು ಪುರವ ರಾಜಾ ಜೋಡಿ ಎಟಿಪಿ ಕ್ಯೂಟೊ ಚಾಲೆಂಜರ್‌ ಟೆನಿಸ್‌ ಟೂರ್ನಿಯಲ್ಲಿ ಫೈನಲ್‌ ತಲುಪಿದೆ.

ಶುಕ್ರವಾರ ನಡೆದ ಸೆಮಿಫೈನಲ್‌ ಹೋರಾಟದಲ್ಲಿ ಭಾರತದ ಜೋಡಿ 7–6, 7–5ರಲ್ಲಿ ಜಪಾನ್‌ನ ತೋಶಿಹೈಡ್‌ ಮಾಥ್ಸುಯಿ ಮತ್ತು ಉದೋಮ್‌ಚೋಕ್‌ ಜೋಡಿ ಎದುರು ಜಯ ಪಡೆಯಿತು.

ಒಂದು ಗಂಟೆ 24 ನಿಮಿಷಗಳ ಕಾಲ ನಡೆದ ಕಠಿಣ ಪೈಪೋಟಿಯಿಂದ ಕೂಡಿದ್ದ ಪಂದ್ಯದ ಎರಡೂ ಸೆಟ್‌ ನಲ್ಲಿ ಭಾರತದ ಜೋಡಿ ಗೆದ್ದು ಬೀಗಿ ತು. ಈ ಋತುವಿನಲ್ಲಿ ದಿವಿಜ್ ಮತ್ತು ರಾಜ ಜೊತೆಯಾಗಿ ಆಡಿ ಫೈನಲ್‌ ಪ್ರವೇಶಿಸಿದ್ದು ಇದೇ ಮೊದಲು.

ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ಭಾರತದ ಜೋಡಿ ಥಾಯ್ಲೆಂಡ್‌ನ ಸ್ಯಾಂಚಾಯ್‌ ರತಿವಾತನ ಮತ್ತು ನ್ಯೂಜಿಲೆಂಡ್‌ನ ಮೈಕಲ್‌ ವೀನಸ್‌ ಜೋಡಿಯ ಎದುರು ಆಡಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.