ಬೆಂಗಳೂರು: ಸ್ಥಳೀಯ ಆಟಗಾರ ಬಿ.ಆರ್ ನಿಕ್ಷೇಪ್ ಇಲ್ಲಿ ನಡೆಯುತ್ತಿರುವ 14 ವರ್ಷ ವಯಸ್ಸಿನೊಳಗಿನವರ ಏಷ್ಯನ್ ಜೂನಿಯರ್ ಟೆನಿಸ್ ಟೂರ್ನಿಯ ಫೈನಲ್ ಪ್ರವೇಶಿಸಿದರು.
ಜೈನ್ ಇಂಟರ್ನ್ಯಾಷನಲ್ ರೆಸಿಡೆನ್ಶಿಯಲ್ ಸ್ಕೂಲ್ ಕೋರ್ಟ್ನಲ್ಲಿ ಗುರುವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ನಿಕ್ಷೇಪ್ 6-0, 6-0 ರಲ್ಲಿ ರಾಘವ್ ಜೈಸಿಂಘಾನಿ
ಶುಕ್ರವಾರ ನಡೆಯುವ ಫೈನಲ್ನಲ್ಲಿ ನಿಕ್ಷೇಪ್ ನಾಲ್ಕನೇ ಶ್ರೇಯಾಂಕದ ವಿಜಯ್ ಮೊಹಂತಿ ಸವಾಲನ್ನು ಎದುರಿಸುವರು. ದಿನದ ಇನ್ನೊಂದು ನಾಲ್ಕರಘಟ್ಟದ ಪಂದ್ಯದಲ್ಲಿ ಮೊಹಂತಿ 6-3, 4-6, 6-1 ರಲ್ಲಿ ಅಲೆಕ್ಸ್ ಸೋಲಂಕಿ ಎದುರು ಪ್ರಯಾಸದ ಗೆಲುವು ಪಡೆದರು.
ಅಲೆಕ್ಸ್ ಜೊತೆ ಆಡುತ್ತಿರುವ ನಿಕ್ಷೇಪ್ ಡಬಲ್ಸ್ ವಿಭಾಗದಲ್ಲೂ ಫೈನಲ್ ಪ್ರವೇಶಿಸಿದರು. ಸೆಮಿಫೈನಲ್ನಲ್ಲಿ ಈ ಜೋಡಿ 6-1, 6-0 ರಲ್ಲಿ ಕಲ್ಯಾಣ್ಪುರ್- ವಣ್ಣಮ್ ರೆಡ್ಡಿ ವಿರುದ್ಧ ಜಯ ಸಾಧಿ ಸಿತು. ಅಲೆಕ್ಸ್- ನಿಕ್ಷೇಪ್ ಪ್ರಶಸ್ತಿಗೆ ಸನಿಲ್ ಜಗತಿಯಾನಿ- ಸೋಮಾನಿ ಪರೀಕ್ಷಿತ್ ಸವಾಲು ಎದುರಿಸುವರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.