ADVERTISEMENT

ಟೆನಿಸ್‌: ರಫೆಲ್ ನಡಾಲ್‌ ಜಯದ ಓಟ

ಏಜೆನ್ಸೀಸ್
Published 7 ಜುಲೈ 2017, 19:30 IST
Last Updated 7 ಜುಲೈ 2017, 19:30 IST
ಮರೀನ್ ಸಿಲಿಕ್ ಆಟದ ವೈಖರಿ
ಮರೀನ್ ಸಿಲಿಕ್ ಆಟದ ವೈಖರಿ   

ಲಂಡನ್‌ (ರಾಯಿಟರ್ಸ್‌/ಎಎಫ್‌ಪಿ): ವಿಂಬಲ್ಡನ್‌ ಟೆನಿಸ್‌ ಟೂರ್ನಿಯಲ್ಲಿ ಸ್ಪೇನ್‌ನ ರಫೆಲ್‌ ನಡಾಲ್‌ ಅವರ ಗೆಲುವಿನ ಓಟ ಮುಂದುವರಿದಿದೆ. ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ ನಡಾಲ್‌ ಅವರು ನಾಲ್ಕನೇ ಸುತ್ತು ಪ್ರವೇಶಿಸಿದ್ದಾರೆ.

ಶುಕ್ರವಾರ ನಡೆದ ಮೂರನೇ ಸುತ್ತಿನ ಪಂದ್ಯದಲ್ಲಿ ನಡಾಲ್‌ 6–1, 6–4, 7–6ರಲ್ಲಿ ರಷ್ಯಾದ ಕರೆನ್‌ ಕಚಾನೊವ್‌ ವಿರುದ್ಧ ಗೆದ್ದರು.
ಇನ್ನೊಂದು ಪಂದ್ಯದಲ್ಲಿ ಮರಿನ್‌ ಸಿಲಿಕ್‌ 6–4, 7–6, 6–3ರಲ್ಲಿ ಜೆರ್ಜಿ ಜಾನೊವಿಚ್‌ ಅವರನ್ನು ಸೋಲಿಸಿದರು.

ಮಹಿಳೆಯರ ಸಿಂಗಲ್ಸ್‌ ವಿಭಾಗದ ಪಂದ್ಯಗಳಲ್ಲಿ ಜೊಹಾನ್ನ ಕೊಂಥಾ 6–4, 6–1ರಲ್ಲಿ ಮರಿಯಾ ಸಕ್ಕಾರಿ ಎದುರೂ, ಜೆಲೆನಾ ಒಸ್ಟಾಪೆಂಕೊ  7–5, 7–5ರಲ್ಲಿ ಕ್ಯಾಮಿಲಾ ಜಿಯಾರ್ಜಿ ಮೇಲೂ, ಸಿಮೊನಾ ಹಲೆಪ್‌ 6–4, 7–6ರಲ್ಲಿ ಪೆಂಗ್‌ ಶೂಯಿ ವಿರುದ್ಧವೂ ಗೆಲುವು ಗಳಿಸಿದರು.

ADVERTISEMENT

ಪುರವ–ದಿವಿಜ್‌ಗೆ ನಿರಾಸೆ:  ಪುರುಷರ ಡಬಲ್ಸ್‌ ವಿಭಾಗದಲ್ಲಿ ಭಾರತದ ಭರವಸೆಯಾಗಿದ್ದ ಪುರವ ರಾಜಾ ಮತ್ತು ದಿವಿಜ್‌ ಶರಣ್‌ ಅವರು ಎರಡನೇ ಸುತ್ತಿನಲ್ಲಿ 3–6, 4–6, 6–4, 7–6, 8–10ರಲ್ಲಿ ರಾವೆನ್‌ ಕ್ಲಾಸೆನ್‌ ಮತ್ತು ರಾಜೀವ್‌ ರಾಮ್‌ ಅವರಿಗೆ ಶರಣಾದರು. ರೋಹನ್‌ ಬೋಪಣ್ಣ ಮತ್ತು ಎಡೌರ್ಡ್‌ ರೋಜರ್‌ ವಸೆಲಿನ್‌ ಅವರು 6–7, 3–6, 7–6, 3–6ರಲ್ಲಿ ಕೆನ್‌ ಮತ್ತು ನಿಯೆಲ್‌ ಸ್ಕುಪ್‌ಸ್ಕಿ ವಿರುದ್ಧ ಸೋತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.