ಧಾರವಾಡ: ಸುಜಿತ್ ಸಚ್ಚಿದಾನಂದ ಮತ್ತು ಜಿ.ಕೆ. ಶ್ವೇತಾ ಭಾನುವಾರ ಇಲ್ಲಿ ಮುಕ್ತಾಯವಾದ ಧ್ರುವ ಗಾಂವ್ಕರ್ ಸ್ಮರಣಾರ್ಥ ‘ಧಾರವಾಡ ಓಪನ್-2011’ ಟೆನಿಸ್ ಟೂರ್ನಿಯಲ್ಲಿ ಕ್ರಮವಾಗಿ ಪುರುಷ ಮತ್ತು ಮಹಿಳೆಯರ ಸಿಂಗಲ್ಸ್ ವಿಭಾಗದ ಪ್ರಶಸ್ತಿ ಗೆದ್ದುಕೊಂಡರು.
ಸುವಿಧಾ ಇವೆಂಟ್ ಮ್ಯಾನೇಜರ್ಸ್ ಆಶ್ರಯದಲ್ಲಿ ಧಾರವಾಡ ಜಿಲ್ಲಾ ಲಾನ್ ಟೆನಿಸ್ ಕೋರ್ಟ್‌ನಲ್ಲಿ ನಡೆದ ಪುರುಷರ ಫೈನಲ್‌ನಲ್ಲಿ ಸುಜೀತ್ ಸಚ್ಚಿದಾನಂದ 6-2, 6-2ರಿಂದ ಮೊಹ್ಮದ್ ಶಹಭಾಜ್ ವಿರುದ್ಧ ಜಯಿಸಿದರು.
ಸೆಮಿಫೈನಲ್‌ನಲ್ಲಿ ಸುಜಿತ್ 9-1 ರಿಂದ ರಾಹುಲ್ ಭಿಲ್ಲೆ ವಿರುದ್ಧ ಗೆಲುವು ಸಾಧಿಸಿದ್ದರು. ಇನ್ನೊಂದು ರೋಚಕ ಸೆಮಿಫೈನಲ್‌ನಲ್ಲಿ ಮೊಹ್ಮದ್ ಶಾಹಭಾಜ್ 9-5ರಿಂದ ಪೀಟರ್ ವಿಜಯಕುಮಾರ ಅವರನ್ನು ಪರಾಭವಗೊಳಿಸಿದರು.
ಎಂಟರ ಘಟ್ಟದ ಪಂದ್ಯಗಳಲ್ಲಿ ರಾಹುಲ್ ಭಿಲ್ಲೆ 8-4ರಿಂದ ನಿಸಾರ್ ಜೇವೂರ್ ವಿರುದ್ಧ, ಸುಜೀತ್ 8-3ರಿಂದ ವಿಕಾಸ ಹನಸೋಗಿ ವಿರುದ್ಧ, ಮೊಹ್ಮದ್ ಶಾಹಬಾಜ್ 8-5ರಿಂದ ಹರ್ಷ ಮಂಜುನಾಥ ವಿರುದ್ಧ ಗೆದ್ದರು.
ಶ್ವೇತಾಗೆ ಪ್ರಶಸ್ತಿ: 19 ವರ್ಷದೊಳಗಿನವರ ವಿಭಾಗದಲ್ಲಿ ಅಂತರರಾಷ್ಟ್ರೀಯ ಆಟಗಾರ್ತಿ ಜಿ.ಕೆ. ಶ್ವೇತಾ 6-0, 6-0ಯಿಂದ ಧಾರವಾಡದ ಪ್ರೇರಣಾ ಕಳವಾರ ಅವರನ್ನು ಹಣಿದರು. ಫೈನಲ್ ಪಂದ್ಯದಲ್ಲಿ ಉತ್ತಮ ಬ್ಯಾಕ್‌ಹ್ಯಾಂಡ್, ಫೋರ್‌ಹ್ಯಾಂಡ್ ಹೊಡೆತಗಳನ್ನು ಪ್ರದರ್ಶಿಶಿದ ಶ್ವೇತಾ, ಪ್ರೇರಣಾ ಅವರಿಗೆ ಪಾಯಿಂಟ್ ಗಳಿಸಲು ಅವಕಾಶವನ್ನೇ ಕೊಡಲಿಲ್ಲ.
ಸುಜಿತ್‌ಗೆ ಡಬಲ್ಸ್ ಪ್ರಶಸ್ತಿ: ಪುರುಷರ ಸಿಂಗಲ್ಸ್ ಪ್ರಶಸ್ತಿ ಗೆದ್ದ ಸುಜೀತ್ ಸಚ್ಚಿದಾನಂದ ಅವರು ಹರ್ಷ ಮಂಜುನಾಥ ಅವರೊಂದಿಗೆ ಸೇರಿ ಡಬಲ್ಸ್ ಪ್ರಶಸ್ತಿಯನ್ನೂ ತಮ್ಮದಾಗಿಸಿಕೊಂಡರು. ಫೈನಲ್‌ನಲ್ಲಿ ಸುಜೀತ್ ಮತ್ತು ಹರ್ಷ ಜೋಡಿಯು 6-0, 6-0ಯಿಂದ ಪೀಟರ್ ವಿಜಯಕುಮಾರ ಮತ್ತು ಎಲ್. ಹರ್ಷ ಅವರನ್ನು ಮಣಿಸಿದರು.
ಸೆಮಿಫೈನಲ್‌ನಲ್ಲಿ ಸುಜೀತ್ ಮತ್ತು ಹರ್ಷ ಜೋಡಿಯು 9-0ಯಿಂದ ರಾಹುಲ್ ಭಿೆ ಮತ್ತು ವಿಕಾಶ ಅನಸೋಗಿ ವಿರುದ್ಧವೂ, ಪೀಟರ್ ಮತ್ತು ಹರ್ಷ ಜೋಡಿಯು 9-3ರಿಂದ ಎಡ್ವಿನ್ ಮೆಂಡೋನ್ಸಾ ಮತ್ತು ಅನಿಲ್ ಸಿಂಧಗಿ ವಿರುದ್ಧ ಜಯ ಗಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.