ಬೆಂಗಳೂರು: ವಿವೇಕ್ ಪರಮಶಿವಯ್ಯ ಹಾಗೂ ಡಿ.ಎಂ.ಪವಿತ್ರಾ ಅವರು `ಕೆಎಸ್‌ಟಿಬಿಎ~ ರಾಜ್ಯ ರ‌್ಯಾಂಕಿಂಗ್ ಟೆನ್‌ಪಿನ್ ಬೌಲಿಂಗ್ ಟೂರ್ನಿ(21 ವರ್ಷ ವಯಸ್ಸಿನೊಳಗಿನವರು)ಯಲ್ಲಿ ಕ್ರಮವಾಗಿ ಬಾಲಕ ಹಾಗೂ ಬಾಲಕಿಯರ ವಿಭಾಗದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.
ನಗರದ ಸ್ಟಾರ್‌ಸಿಟಿಯಲ್ಲಿ ಶನಿವಾರ ನಡೆದ ಬಾಲಕರ ವಿಭಾಗದ ಅಂತಿಮ ಪೈಪೋಟಿಯಲ್ಲಿ ವಿವೇಕ್ 157-151 ಪಾಯಿಂಟುಗಳ ಅಂತರದಿಂದ ಜೆಐಆರ್‌ಎಸ್‌ನ ಸುಜಯ್ ಕೊಲ್ಟೆ ವಿರುದ್ಧ ವಿಜಯ ಸಾಧಿಸಿದರು.
ಇದಕ್ಕೂ ಮುನ್ನ ಸೆಮಿಫೈನಲ್‌ನಲ್ಲಿ ವಿವೇಕ್ ಹಾಗೂ ಪ್ರತ್ಯೇಕ್ ಸತ್ಯ 171-171 ಪಾಯಿಂಟುಗಳಿಂದ ಸಮಬಲ ತೋರಿದರು. ಆಗ ವಿಜಯಿಯನ್ನು ನಿರ್ಧರಿಸಲು `ಒನ್ ಬೌಲ್ ರೋಲ್~ ನಿಯಮ ಜಾರಿಗೊಳಿಸಲಾಯಿತು. ಆಗ ವಿವೇಕ್ 9-7ರಲ್ಲಿ ಮುನ್ನಡೆ ಸಾಧಿಸಿದರು. ನಾಲ್ಕರ ಘಟ್ಟದ ಇನ್ನೊಂದು ಪಂದ್ಯದಲ್ಲಿ ಸುಜಯ್ 157-153ರಲ್ಲಿ ಮೈಸೂರಿನ ದೀಕ್ಷಿತ್ ಸೋಳಂಕಿ ಎದುರು ಜಯ ಗಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.