ADVERTISEMENT

ಟೆನ್‌ಪಿನ್ ಬೌಲಿಂಗ್: ಸಾಧಕರಿಗೆ ಬಹುಮಾನ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2011, 19:30 IST
Last Updated 9 ಸೆಪ್ಟೆಂಬರ್ 2011, 19:30 IST

ಬೆಂಗಳೂರು: ಮಲೇಷ್ಯಾದಲ್ಲಿ ಇತ್ತೀಚಿಗೆ ನಡೆದ 5ನೇ ಕಾಮನ್‌ವೆಲ್ತ್ ಟೆನ್ ಪಿನ್ ಬೌಲಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಜಯಿಸಿದ ಭಾರತ ತಂಡಕ್ಕೆ ಭಾರತ ಟೆನ್‌ಪಿನ್ ಬೌಲಿಂಗ್ ಫೆಡರೇಷನ್ ಅಧ್ಯಕ್ಷ ಕೆ. ಚಿದಂಬರಂ ಗುರುವಾರ ಸನ್ಮಾನಿಸಿ 75 ಸಾವಿರ ರೂ. ಬಹುಮಾನ ನೀಡಿದರು.

ಟೆನ್ ಪಿನ್ ಬೌಲಿಂಗ್ ಚಾಂಪಿಯನ್‌ಷಿಪ್‌ನ ಮಿಶ್ರ 4 ತಂಡ ವಿಭಾಗದಲ್ಲಿ ಆಕಾಶ್ ಅಶೋಕ್ ಕುಮಾರ್, ಸ್ವಪ್ನ ಮಿತ್ರಾ, ಪ್ರತಿಮಾ ಹೆಗ್ಡೆ ಹಾಗೂ ಶಬ್ಬೀರ್ ಧನ್ಕೋಟ್ ಅವರನ್ನೊಳಗೊಂಡ ಭಾರತ ತಂಡ ಕಂಚಿನ ಪದಕ ಜಯಿಸಿತ್ತು. ಭಾರತ 9 ವರ್ಷಗಳ ಬಳಿಕ ಪದಕ ಜಯಿಸಿದೆ. 
 
ನಂತರ ಮಾತನಾಡಿದ ಕಾರ್ತಿಕ್ `2014ರ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತ ಪದಕ ಗೆಲ್ಲುವ ಮಹತ್ವದ ಗುರಿ ಹೊಂದಿದೆ. ಭಾರತದಲ್ಲಿ ಇತರ ಕ್ರೀಡೆಗಳಿಗೆ ಸಿಗುವ ಸೌಲಭ್ಯ ಹಾಗೂ ಉತ್ತಮ ಕೋಚ್ ಟೆನ್ ಪಿನ್‌ಗೂ ಸಿಗಬೇಕು~ ಎಂದರು.

`ಇದೊಂದು ಮಹತ್ವದ ಕ್ಷಣ. ಈ ಬೆಂಬಲ ಮುಂದೆ ಹೆಚ್ಚು ಸಾಧನೆ ಮಾಡಲು ಪ್ರೇರಣೆ. ಮುಂಬರುವ ರಾಷ್ಟ್ರೀಯ ಕ್ರೀಡಾಕೂಟದಲ್ಲಿಯು ಉತ್ತಮ ಪ್ರದರ್ಶನ ನೀಡುತ್ತೇವೆ~ ಎಂದು ಸನ್ಮಾನ ಸ್ವೀಕರಿಸಿದ ಪದಕ ವಿಜೇತರು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.