ADVERTISEMENT

ಟೇಬಲ್ ಟೆನಿಸ್‌: ಮಹಿಳೆಯರಿಗೆ ಜಯ

ಪಿಟಿಐ
Published 5 ಏಪ್ರಿಲ್ 2018, 19:30 IST
Last Updated 5 ಏಪ್ರಿಲ್ 2018, 19:30 IST
ಟೇಬಲ್ ಟೆನಿಸ್‌: ಮಹಿಳೆಯರಿಗೆ ಜಯ
ಟೇಬಲ್ ಟೆನಿಸ್‌: ಮಹಿಳೆಯರಿಗೆ ಜಯ   

ಗೋಲ್ಡ್ ಕೋಸ್ಟ್‌: ಭಾರತ ಮಹಿಳಾ ತಂಡದವರು ಕಾಮನ್‌ವೆಲ್ತ್ ಕ್ರೀಡಾಕೂಟದ ತಂಡ ವಿಭಾಗದ ಟೇಬಲ್ ಟೆನಿಸ್‌ನ ಮೊದಲ ಹಣಾ ಹಣಿಯಲ್ಲಿ ಗೆಲುವು ಸಾಧಿಸಿದರು. ಶ್ರೀಲಂಕಾ ವಿರುದ್ಧ ನಡೆದ ಪಂದ್ಯದಲ್ಲಿ ಭಾರತ 3–0 ಅಂತರದಿಂದ ಗೆದ್ದಿತು.

ಮೊದಲ ಸಿಂಗಲ್ಸ್ ಪಂದ್ಯದಲ್ಲಿ ಮಣಿಕಾ ಬಾತ್ರಾ ಅವರು ಏರಾಂಡಿ ವರುಸವಿತನ ಎದುರು 11–3, 11–5, 11–3ರಿಂದ ಗೆದ್ದರು. ಪುರುಷರ ಸಿಂಗಲ್ಸ್‌ನಲ್ಲಿ ಜಯ ಸಾಧಿಸುವ ಮೂಲಕ ಸುತೀರ್ಥ ಮುಖರ್ಜಿ ಭಾರತದ ಮುನ್ನಡೆಯನ್ನು 2–0ಗೆ ಏರಿಸಿದರು. ಅವರು ಇಶಾರ ಮಣಿಕ್ಕು ಬದು ವಿರುದ್ಧ 11–5, 11–8, 11–4ರಿಂದ ಗೆದ್ದರು.

ಮಿಶ್ರ ಡಬಲ್ಸ್‌ ವಿಭಾಗದಲ್ಲಿ ಪೂಜಾ ಸಹಸ್ರಬುದ್ಧೆ ಅವರೊಂದಿಗೆ ಸುತೀರ್ಥ ಗೆಲುವಿನ ನಗೆ ಸೂಸಿದರು. ಹಂಸಾನಿ ಕಪುಗೀಕಿಯನ ಮತ್ತು ಇಶಾರ ಮಣಿಕ್ಕು ಬದು ಅವರನ್ನು ಈ ಜೋಡಿ 11–6, 11–7, 11–3ರಿಂದ ಮಣಿಸಿದ ಅವರು ಮುನ್ನಡೆಯನ್ನು ಇನ್ನಷ್ಟು ಹೆಚ್ಚಿಸಿದರು.

ADVERTISEMENT

ವೇಲ್ಸ್ ವಿರುದ್ಧ ಗೆಲುವು: ಮಧ್ಯಾಹ್ನ ನಡೆದ ವೇಲ್ಸ್ ವಿರುದ್ಧದ ಪಂದ್ಯದಲ್ಲೂ ಭಾರತ ಜಯಭೇರಿ ಮೊಳಗಿಸಿತು. ಈ ಹಣಾಹಣಿಯಲ್ಲಿ ಭಾರತ 3–1ರಿಂದ ಗೆದ್ದಿತು. ಮಣಿಕಾ ಅವರು ಚಾರ್ಲೊಟಿ ಕಾರಿ ಅವರನ್ನು 11–8, 8–11, 11–5, 11–4ರಿಂದ ಮಣಿಸಿದರೆ ಮೌಮಾ ದಾಸ್‌ 12–10, 11–7, 11–7ರಿಂದ ಕ್ಲಾ ಥಾಮಸ್ ಎದುರು ಗೆದ್ದು ಮುನ್ನಡೆಯನ್ನು 2–0ಗೆ ಏರಿಸಿದರು.

ಮೂರನೇ ಪಂದ್ಯದಲ್ಲಿ ಮಧುರಿಕಾ ಪಾಟ್ಕರ್‌ ಮತ್ತು ಮೌಮಾ ದಾಸ್‌ ಚಾರ್ಲೊಟಿ ಕಾರಿ ಮತ್ತು ಅನಾ ಹಾರ್ಸಿ ಎದುರು 8–11, 5–11, 11–5, 11–7, 11–13ರಿಂದ ಸೋತರು. ಆದರೆ ಕ್ಲಾ ಥಾಮಸ್ ವಿರುದ್ಧದ ಸಿಂಗಲ್ಸ್‌ನಲ್ಲಿ ಪಾಟ್ಕರ್‌ 11–3, 11–4, 12–10ರಿಂದ ಗೆದ್ದು ಭಾರತ ಪಾಳಯದಲ್ಲಿ ಸಂತಸದ ಅಲೆ ಎಬ್ಬಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.