ADVERTISEMENT

ಟೇಬಲ್ ಟೆನಿಸ್: ಮೈತ್ರೇಯಿ, ಪ್ರೀತಮ್ ಚಾಂಪಿಯನ್

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2012, 19:30 IST
Last Updated 10 ನವೆಂಬರ್ 2012, 19:30 IST

ಬೆಂಗಳೂರು: ಉತ್ತಮ ಪ್ರದರ್ಶನ ನೀಡಿದ ಮೈತ್ರೇಯಿ ಬೈಲೂರ್ ಇಲ್ಲಿ ನಡೆದ ಡಾ. ಎಂ.ಎಸ್. ರಾಮಯ್ಯ ಸ್ಮಾರಕ ಟೇಬಲ್ ಟೆನಿಸ್ ಟೂರ್ನಿಯ ಜೂನಿಯರ್ ಬಾಲಕಿಯರ ವಿಭಾಗದಲ್ಲಿ ಚಾಂಪಿಯನ್ ಆದರು.

ಮಲ್ಲೇಶ್ವರಂ ಸಂಸ್ಥೆ ಹಾಲ್‌ನಲ್ಲಿ ಶನಿವಾರ ನಡೆದ ಫೈನಲ್‌ನಲ್ಲಿ ಬಿಟಿಟಿಎಯ ಮೈತ್ರೇಯಿ 11-7, 11-7, 11-6, 11-5 ರಲ್ಲಿ ಎಚ್‌ಟಿಟಿಎ ಕ್ಲಬ್‌ನ ಮಾಧುರ್ಯ ಅವರನ್ನು ಮಣಿಸಿದರು.

ಕೆ.ಎನ್. ಪ್ರೀತಮ್ ಮತ್ತು ಕಿರಣ್ ಸಂಜೀವ ಅವರು ಇದೇ ಟೂರ್ನಿಯಲ್ಲಿ ಕ್ರಮವಾಗಿ ಕೆಡೆಟ್ ಬಾಲಕ ಹಾಗೂ ಬಾಲಕಿಯರ ವಿಭಾಗದ ಪ್ರಶಸ್ತಿ ತಮ್ಮದಾಗಿಸಿಕೊಂಡರು.

ಪ್ರೀತಮ್ ಫೈನಲ್‌ನಲ್ಲಿ 11-9, 11-9, 11-7 ರಲ್ಲಿ ದಕ್ಷ್ ತೆಲಾಂಗ್ ವಿರುದ್ಧ ಗೆಲುವು ಪಡೆದರು. ಸೆಮಿಫೈನಲ್ ಪಂದ್ಯಗಳಲ್ಲಿ ಪ್ರೀತಮ್ 11-8, 11-6, 11-8 ರಲ್ಲಿ ಸಮರ್ಥ್  ಎದುರೂ, ದಕ್ಷ್ 7-11, 11-9, 9-11, 11-9, 12-10 ರಲ್ಲಿ ರಂಗನಾಥ್ ವಿರುದ್ಧವೂ ಜಯ ಸಾಧಿಸಿದ್ದರು.

ಕೆಡೆಟ್ ಬಾಲಕಿಯರ ವಿಭಾಗದ ಫೈನಲ್‌ನಲ್ಲಿ ಕಿರಣ್ ಸಂಜೀವ 6-11, 13-11, 11-8, 11-9 ರಲ್ಲಿ ರುತು ರೋಹಿತ್ ಮೇಲೆ ಗೆಲುವು ಪಡೆದು ಚಾಂಪಿಯನ್ ಆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.