ADVERTISEMENT

ಡಿಎಸ್‌ಸಿಇಗೆ ಭರ್ಜರಿ ಜಯ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2018, 19:30 IST
Last Updated 26 ಮಾರ್ಚ್ 2018, 19:30 IST

ಬೆಂಗಳೂರು: ನಗರದ ಡಿ.ಎಸ್‌.ಸಿ.ಇ ಮತ್ತು ಎಸ್‌.ವಿ.ಐಟಿ ತಂಡದವರು ಡಾ.ಎಂ.ಎಸ್.ರಾಮಯ್ಯ ಸ್ಮಾರಕ ಅಂತರ ಎಂಜಿನಿಯರಿಂಗ್ ಕಾಲೇಜು ಕ್ರಿಕೆಟ್ ಟೂರ್ನಿಯ ಮೊದಲ ದಿನವಾದ ಸೋಮವಾರ ಭರ್ಜರಿ ಜಯ ಸಾಧಿಸಿದರು.

ಟೂರ್ನಿಯ ಮೊದಲ ಪಂದ್ಯದಲ್ಲಿ ಎಸ್‌.ವಿ.ಐ.ಟಿ ತಂಡ ಬಿ.ಎನ್‌.ಎಂ.ಐ.ಟಿ ವಿರುದ್ಧ ಎಂಟು ವಿಕೆಟ್‌ಗಳ ಜಯ ಸಾಧಿಸಿತು. ಸಿ.ಐಟಿ ವಿರುದ್ಧದ ಪಂದ್ಯದಲ್ಲಿ ಡಿ.ಎಸ್.ಸಿ.ಇ ಒಂಬತ್ತು ವಿಕೆಟ್‌ಗಳಿಂದ ಗೆದ್ದಿತು. ಉಳಿದ ಪಂದ್ಯಗಳಲ್ಲಿ ಜೆ.ಎಸ್.ಎಸ್‌.ಎ.ಟಿ.ಇ ತಂಡ ಕೆ.ಎನ್‌.ಎಸ್‌.ಐಟಿ ವಿರುದ್ಧ 76 ರನ್‌ಗಳಿಂದ ಮತ್ತು ಟಿ.ಟಿ.ಐಟಿ ತಂಡ ಬಿ.ಐಟಿ ಎದುರು 29 ರನ್‌ಗಳಿಂದ ಗೆದ್ದಿತು.

ಸಂಕ್ಷಿಪ್ತ ಸ್ಕೋರ್‌: ಬಿ.ಎನ್‌.ಎಂ.ಐಟಿ: 29.3 ಓವರ್‌ಗಳಲ್ಲಿ 107 (ಶ್ರೀವತ್ಸ 37, ರೋಹಿತ್ ಜೆ 35; ಮಹಮ್ಮದ್ ಇಮ್ರಾನ್‌ 36ಕ್ಕೆ3, ತಿರುಮಲೇಶ್‌ 2ಕ್ಕೆ3); ಎಸ್.ವಿ.ಐಟಿ: 16 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 108 (ಸಂಕೃತ್‌ ಔಟಾಗದೆ 67; ರೋಹನ್ ರವಿ 23ಕ್ಕೆ2). ಜೆ.ಎಸ್‌.ಎಸ್‌.ಎ.ಟಿ.ಇ: 30 ಓವರ್‌ಗಳಲ್ಲಿ 9ಕ್ಕೆ 170 (ಸುಭಾಷ್‌ ರಾಜ್‌ 43, ರಾಹುಲ್‌ ಎಸ್‌.ಜಿ 30, ಕಿಶನ್‌ 33ಕ್ಕೆ3); ಕೆ.ಎನ್‌.ಎಸ್‌.ಐಟಿ: 17 ಓವರ್‌ಗಳಲ್ಲಿ 94 (ಅಮಿತ್‌ 39ಕ್ಕೆ5, ರಾಕೇಶ್‌ 17ಕ್ಕೆ2). ಸಿಐಟಿ: 19 ಓವರ್‌ಗಳಲ್ಲಿ 101 (ವಿಕಾಸ್‌ 20ಕ್ಕೆ5, ದೀಪಕ್‌ 7ಕ್ಕೆ3); ಡಿ.ಎಸ್‌.ಸಿ.ಇ: 12.4 ಓವರ್‌ಗಳಲ್ಲಿ ಒಂದು ವಿಕೆಟ್‌ಗೆ 102 (ನಿಖಿಲ್‌ ಬಿ ಔಟಾಗದೆ 47, ಮನೀಶ್ ಎಸ್‌ 38). ಟಿ.ಟಿ.ಐಟಿ: 30 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 220 (ಮುನಿಸ್ವಾಮಿ 95, ಶ್ರೀಶೈಲ ಬಿ ಔಟಾಗದೆ 62, ಅಡ್ನಾನ್ ಎಫ್‌.ಎಂ 37); ಬಿ.ಐಟಿ: 27.3 ಓವರ್‌ಗಳಲ್ಲಿ 192 (ವಿಶ್ರುತ್ 56, ಪ್ರಜ್ವಲ್‌ ಔಟಾಗದೆ 45; ಜೆಸ್ಸಿ ಪಾಲ್‌ 27ಕ್ಕೆ3, ಬಸವರಾಜ್‌ 31ಕ್ಕೆ2).

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.