ADVERTISEMENT

ಡೋಪಿಂಗ್ ಬಲೆಯಲ್ಲಿ ಕಿಪ್ರೊಪ್‌

ಏಜೆನ್ಸೀಸ್
Published 3 ಮೇ 2018, 20:11 IST
Last Updated 3 ಮೇ 2018, 20:11 IST
ಡೋಪಿಂಗ್ ಬಲೆಯಲ್ಲಿ ಕಿಪ್ರೊಪ್‌
ಡೋಪಿಂಗ್ ಬಲೆಯಲ್ಲಿ ಕಿಪ್ರೊಪ್‌   

ದೋಹಾ (ಎಎಫ್‌ಪಿ): ಒಲಿಂಪಿಕ್‌ ಕೂಟದಲ್ಲಿ ಚಿನ್ನ ಗೆದ್ದಿದ್ದ ಮತ್ತು ಮೂರು ಬಾರಿ ವಿಶ್ವ ಚಾಂಪಿಯನ್ ಆಗಿದ್ದ ಮಧ್ಯಮ ದೂರ ಓಟಗಾರ, ಕಿನ್ಯಾದ ಅಸ್ಬೆಲ್‌ ಕಿಪ್ರೊಪ್‌ ಡೋಪಿಂಗ್ ಬಲೆಯಲ್ಲಿ ಸಿಲುಕಿದ್ದಾರೆ.

ಅವರು ಸಾಮರ್ಥ್ಯ ಹೆಚ್ಚಿಸುವ ಉದ್ದೀಪನ ಔಷಧಿ ಎರಿತ್ರೋಪೀಟಿನ್‌ ಸೇವಿಸಿರುವುದಾಗಿ ಪರೀಕ್ಷೆಯಿಂದ ಸಾಬೀತಾಗಿರುವುದಾಗಿ ವರದಿಗಳು ಹೇಳಿವೆ.

ಆದರೆ ಇದನ್ನು ನಿರಾಕರಿಸಿರುವ ಕಿಪ್ರೊವ್‌ ‘ಸ್ಪರ್ಧೆ ನಡೆಯದ ಸಂದರ್ಭ ದಲ್ಲಿ ನನ್ನಿಂದ ಮಾದರಿಯನ್ನು ಸಂಗ್ರಹಿ ಸಿದ್ದು ನನ್ನನ್ನು ಕ್ರೀಡಾ ಕ್ಷೇತ್ರದಿಂದ ಹೊರಗಿಡುವುದಕ್ಕಾಗಿ ಯಾರೋ ಅದರಲ್ಲಿ ಉದ್ದೀಪನ ಔಷಧಿ ಸೇರಿಸಿದ್ದಾರೆ’ ಎಂದು ದೂರಿದ್ದಾರೆ.

ADVERTISEMENT

‘ಈ ಆರೋಪವನ್ನು ನಾನು ಖಡಾಖಂಡಿತವಾಗಿ ನಿರಾಕರಿಸುತ್ತೇನೆ. ನಾನು ಉದ್ದೀಪನ ಔಷಧಿ ಸೇವಿಸಿಲ್ಲ. ಇಂಥ ಸುಳ್ಳು ಆರೋಪಗಳಿಗೆ ಒಳಗಾಗುವ ಕೊನೆಯ ಕ್ರೀಡಾಪಟು ನಾನೇ ಆಗಿರಲಿ ಎಂಬುದು ನನ್ನ ಆಶಯ’ ಎಂದು 28 ವರ್ಷದ ಕಿಪ್ರೊಪ್ ಸುದೀರ್ಘವಾದ ವಾಟ್ಸ್‌ಆ್ಯಪ್‌ ಸಂದೇಶದಲ್ಲಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.