ADVERTISEMENT

ಡ್ರಾ ಪಂದ್ಯದಲ್ಲಿ ನೇಗಿ

​ಪ್ರಜಾವಾಣಿ ವಾರ್ತೆ
Published 8 ಜುಲೈ 2012, 19:30 IST
Last Updated 8 ಜುಲೈ 2012, 19:30 IST

ಲೀಡನ್, ಹಾಲೆಂಡ್ (ಪಿಟಿಐ): ಗ್ರ್ಯಾಂಡ್‌ಮಾಸ್ಟರ್ ಹಾಗೂ ಏಷ್ಯನ್ ಚಾಂಪಿಯನ್ ಭಾರತದ ಪರಿಮಾರ್ಜನ ನೇಗಿ ಇಲ್ಲಿ ನಡೆಯುತ್ತಿರುವ ಲೀಡನ್ ಅಂತರರಾಷ್ಟ್ರೀಯ ಚೆಸ್ ಟೂರ್ನಿಯ ಎರಡನೇ ಸುತ್ತಿನ ಪಂದ್ಯದಲ್ಲಿ ಹಾಲೆಂಡ್‌ನ ಜೆಫ್ ರಿಜ್‌ನಾರ್ಟ್ಸ್ ಎದುರು ಡ್ರಾ ಮಾಡಿಕೊಂಡಿದ್ದಾರೆ.

ನೇಗಿ ಮೊದಲ ಸುತ್ತಿನಲ್ಲಿ ಗೆಲುವು ಸಾಧಿಸಿದ್ದರು. ಇದರೊಂದಿಗೆ ಅವರು ಒಟ್ಟು 1.5 ಪಾಯಿಂಟ್ ಹೊಂದಿದ್ದಾರೆ. ಇನ್ನೂ ಏಳು ಸುತ್ತಿನ ಪಂದ್ಯ ಬಾಕಿ ಉಳಿದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.