ADVERTISEMENT

ತಂಡವನ್ನು ಗೆಲ್ಲಿಸಬೇಕು: ದಿನೇಶ್ ಕಾರ್ತಿಕ್

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2013, 19:59 IST
Last Updated 8 ಏಪ್ರಿಲ್ 2013, 19:59 IST

ಮುಂಬೈ (ಪಿಟಿಐ): `ನಾನು ಆಡುತ್ತಿರುವ ರೀತಿ ಖಂಡಿತ ಖುಷಿ ಉಂಟು ಮಾಡಿದೆ. ಆದರೆ ಕೊನೆಯವರೆಗೆ ಕ್ರೀಸ್‌ನಲ್ಲಿ ನಿಂತು ತಂಡವನ್ನು ಗೆಲ್ಲಿಸಿಕೊಡಬೇಕು. ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲಿ ಆ ರೀತಿ ನಾನು ಮಾಡಬೇಕಿತ್ತು. ಚೆನ್ನೈನಲ್ಲಿ ನಡೆದ ಪಂದ್ಯದ ವೇಳೆ ಪೊಲಾರ್ಡ್ ಸಹಾಯಕ್ಕೆ ನಿಂತರು' ಎಂದು ಮುಂಬೈ ಇಂಡಿಯನ್ಸ್ ತಂಡದ ದಿನೇಶ್ ಕಾರ್ತಿಕ್ ಹೇಳಿದ್ದಾರೆ.

`ರಿಕಿ ಪಾಂಟಿಂಗ್ ನನ್ನ ನೆಚ್ಚಿನಆಟಗಾರ. ಅವರು ಬ್ಯಾಟಿಂಗ್ ನನಗೆ ಸದಾ ಖುಷಿ ನೀಡುತ್ತದೆ. ಅವರನ್ನು ಭೇಟಿ ಮಾಡಬೇಕೆಂಬ ಆಸೆ ಇತ್ತು. ಆದರೆ ಈಗ ಅವರೊಂದಿಗೆ ತಂಡದಲ್ಲಿದ್ದೇನೆ. ಇದು ನನಗೆ ಮತ್ತಷ್ಟು ಬಲ ನೀಡಿದೆ. ಮುಂದಿನ ಪಂದ್ಯಗಳಲ್ಲೂ ಉತ್ತಮ ಪ್ರದರ್ಶನ ತೋರುವ ವಿಶ್ವಾಸವಿದೆ' ಎಂದು ಅವರು ತಿಳಿಸಿದ್ದಾರೆ.

ಮುಂಬೈ ಇಂಡಿಯನ್ಸ್ ತಂಡದವರು ಮಂಗಳವಾರ ವಾಂಖೆಡೆ ಕ್ರೀಡಾಂಗಣದಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್ ಎದುರು ಆಡಲಿದ್ದಾರೆ.

`ಸಚಿನ್ ಮತ್ತು ಪಾಂಟಿಂಗ್ ಮೊದಲ ಪಂದ್ಯದಲ್ಲಿ ತಂಡಕ್ಕೆ ಉತ್ತಮ ಆರಂಭ ದೊರಕಿಸಿಕೊಟ್ಟಿದ್ದರು. ಏಳು ಓವರ್‌ಗಳಲ್ಲಿ 52 ರನ್ ಗಳಿಸಿದ್ದರು. ಮಧ್ಯಮ ಕ್ರಮಾಂಕದ ಆಟಗಾರರು ಇನ್ನುಳಿದ ರನ್ ಗಳಿಸಬೇಕಿತ್ತು. ಆದರೆ ಸದ್ಯದ ಬೆಳವಣಿಗೆಗಳು ನಮಗೆ ಖುಷಿ ನೀಡಿವೆ' ಎಂದು ವಿಕೆಟ್ ಕೀಪರ್ ಕಾರ್ತಿಕ್ ನುಡಿದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.