ADVERTISEMENT

ತವರಿನಲ್ಲಿ ಆಡಿದಾಗ ಸಂತೋಷ ಹೆಚ್ಚು

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2011, 19:30 IST
Last Updated 17 ಮಾರ್ಚ್ 2011, 19:30 IST

ನ್ಯೂಜಿಲೆಂಡ್ ವಿರುದ್ಧ ವಿಶ್ವಕಪ್ ಕ್ರಿಕೆಟ್‌ನ ನಮ್ಮ ಕೊನೆಯ ಲೀಗ್ ಪಂದ್ಯವನ್ನು ಮುಂಬೈನಲ್ಲಿ ಆಡಬೇಕು. ಅದಕ್ಕಾಗಿ ತಕ್ಕ ಸಿದ್ಧತೆಯನ್ನು ಮಾಡಿಕೊಂಡಿದ್ದೇವೆ. ಸುಮಾರು ಒಂದು ವಾರದ ಅವಧಿಯಲ್ಲಿ ಇಲ್ಲಿನ ವಾತಾವರಣಕ್ಕೆ ಹೊಂದಿಕೊಂಡ ನೆಟ್ಸ್‌ನಲ್ಲಿ ಅಭ್ಯಾಸ ಮಾಡಿದ್ದೇವೆ. ನಾಕ್‌ಔಟ್ ಹಂತದ ಸವಾಲು ಎದುರಿಸಲು ಮಾನಸಿಕವಾಗಿ ಸಜ್ಜಾಗಲು ಶುಕ್ರವಾರದ ಪಂದ್ಯ ಮಹತ್ವದ್ದು. ಆದರೆ ಈ ಪಂದ್ಯವನ್ನೂ ನಮ್ಮ ನಾಡಿನಲ್ಲಿಯೇ ಆಡಬೇಕಿತ್ತು ಎಂದು ಅನಿಸಿರುವುದು ಸಹಜ. ನಮ್ಮ ನಾಡಿನಲ್ಲಿಯೇ ಆಡಿದಾಗ ಸಂತೋಷ ಹೆಚ್ಚು. ಪ್ರೇಕ್ಷಕರಿಂದಲೂ ಭಾರಿ ಬೆಂಬಲ ದೊರೆಯುತ್ತದೆ. ದೇಶದಿಂದ ಹೊರಗೆ ಆಡುವುದು ಕೂಡ ಅನುಕೂಲ.

ಕಳೆದ ಭಾನುವಾರವೇ ಇಲ್ಲಿಗೆ ಆಗಮಿಸಿದೆವು. ಆರಂಭದ ದಿನ ಲಘು ವ್ಯಾಯಾಮ ಮಾಡಿದೆವು. ಅನಗತ್ಯವಾಗಿ ದೇಹದ ಮೇಲೆ ಹೆಚ್ಚಿನ ಒತ್ತಡವನ್ನು ಹಾಕುವುದು ಒಳಿತಲ್ಲವೆಂದು ನಿರ್ಧರಿಸಿದ್ದರ ಕಾರಣ ಹೀಗೆ ಮಾಡಲಾಯಿತು. ಕಳೆದ ಪಂದ್ಯದ ನಂತರ ನಮಗೆ ಸಾಕಷ್ಟು ಕಾಲಾವಕಾಶ ಸಿಕ್ಕಿತು. ಆದ್ದರಿಂದ ಕಿವೀಸ್ ವಿರುದ್ಧದ ಪಂದ್ಯದ ಬಗ್ಗೆ ಚರ್ಚೆ ಮಾಡಿ ಯೋಜನೆ ರೂಪಿಸಿಕೊಳ್ಳುವುದು ಕಷ್ಟವಾಗಲಿಲ್ಲ. ಅಭ್ಯಾಸದ ನಂತರ ಆಟಗಾರರು ಉತ್ಸಾಹದಿಂದ ಕಾಲ ಕಳೆದಿದ್ದಾರೆ. ಆದ್ದರಿಂದ ಹೊಸ ಹುಮ್ಮಸ್ಸು ಕಾಣಿಸುತ್ತಿದೆ.

ವಿಶ್ವಕಪ್ ಆರಂಭವಾದ ನಂತರ ನಾವು ಭಾರತದಲ್ಲಿ ಆಡುತ್ತಿರುವ ಮೊದಲ ಪಂದ್ಯ ಇದಾಗಿದೆ. ಆದ್ದರಿಂದ ಪಿಚ್ ಗುಣದ ಬಗ್ಗೆ ಸ್ಪಷ್ಟವಾಗಿ ಹೇಳುವುದಕ್ಕೆ ಆಗದು. ಒಂದಂತೂ ಸ್ಪಷ್ಟ; ಶ್ರೀಲಂಕಾದಲ್ಲಿನಂತೆ ಇಲ್ಲಿನ ಅಂಗಳದಲ್ಲಿ ಚೆಂಡು ಹೆಚ್ಚು ತಿರುವು ಪಡೆಯದು. ಬೌಲರ್‌ಗಳಿಗೆ ಸ್ಪಂದಿಸುವುದೂ ಕಷ್ಟ. ಬ್ಯಾಟ್ಸ್‌ಮನ್‌ಗಳಿಗೆ ಸಾಕಷ್ಟು ಅವಕಾಶ ಇರುತ್ತದೆ ಎನ್ನುವುದು ಖಚಿತ.
-ಗೇಮ್‌ಪ್ಲಾನ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.