ಮುಂಬೈ (ಪಿಟಿಐ): ಭಾರತ ಟೆಸ್ಟ್ ತಂಡಕ್ಕೆ ಆಯ್ಕೆ ಆಗಿರುವ ಅನುಭವಿ ವೇಗಿ ಜಹೀರ್ ಖಾನ್ ಹಾಗೂ ಬ್ಯಾಟ್ಸ್‌ಮನ್ ಚೇತೇಶ್ವರ ಪೂಜಾರ ಇತರ ಮೂವರು ಆಟಗಾರರೊಂದಿಗೆ ಬುಧವಾರ ಮುಂಜಾನೆ ದಕ್ಷಿಣ ಆಫ್ರಿಕಾಕ್ಕೆ ತೆರಳಿದರು.
ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದಿ ರುವ ಜಹೀರ್, ಪೂಜಾರ, ಆರಂಭಿಕ ಆಟಗಾರ ಮುರಳಿ ವಿಜಯ್, ಲೆಗ್ ಸ್ಪಿನ್ನರ್ ಅಮಿತ್ ಮಿಶ್ರಾ ಮತ್ತು ಕಾಯ್ದಿರಿಸಿದ ವಿಕೆಟ್ ಕೀಪರ್ ವೃದ್ಧಿಮಾನ್ ಷಾ ಎರಡು ದಿನಗಳ ಹಿಂದೆಯೇ ಪ್ರವಾಸ ಕೈಗೊಳ್ಳಬೇಕಿತ್ತು.
ದ.ಆಫ್ರಿಕಾದ ಹವಾಗುಣಕ್ಕೆ ಆದಷ್ಟು ಬೇಗ ಹೊಂದಿಕೊಳ್ಳಲಿ ಎಂಬ ಉದ್ದೇಶದಿಂದ ಈ ಐವರು ಆಟಗಾ ರರನ್ನು ಬಿಸಿಸಿಐ ಏಕದಿನ ತಂಡ ದೊಂದಿಗೆ ಕಳುಹಿಸಲು ನಿರ್ಧರಿಸಿತ್ತು. ಆದರೆ ವೀಸಾ ಸೇರಿದಂತೆ ಇತರ ಸಮಸ್ಯೆಯಿಂದಾಗಿ ಈ ಆಟಗಾರರ ಪ್ರಯಾಣ ವಿಳಂಬವಾಗಿದೆ.
ಡಿಸೆಂಬರ್ 18 ರಿಂದ ಜೋಹಾನ್ಸ್‌ಬರ್ಗ್‌ನಲ್ಲಿ ಮೊದಲ ಟೆಸ್ಟ್ ಆರಂಭವಾಗಲಿದ್ದು, ಇದಕ್ಕೂ ಮುನ್ನ ಭಾರತ ದ.ಆಫ್ರಿಕಾ ಆಹ್ವಾನಿತ ಇಲೆವೆನ್ ವಿರುದ್ಧ ಎರಡು ದಿನಗಳ ಅಭ್ಯಾಸ ಪಂದ್ಯಗಳನ್ನು ಆಡಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.