ಪೋರ್ಟ್ ಎಲಿಜಬೆತ್ : ಹಾಶೀಮ್ ಆಮ್ಲಾ (56; 148ಎ, 6ಬೌಂ) ಮತ್ತು ಎಬಿ ಡಿವಿಲಿಯರ್ಸ್ (ಬ್ಯಾಟಿಂಗ್ 74; 81ಎ, 14ಬೌಂ) ಅವರ ಅರ್ಧಶತಕಗಳ ಬಲದಿಂದ ದಕ್ಷಿಣ ಆಫ್ರಿಕಾ ತಂಡ ಆಸ್ಟ್ರೇಲಿಯಾ ಎದುರಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ಮುನ್ನಡೆ ಗಳಿಸಿದೆ.
1 ವಿಕೆಟ್ಗೆ 39ರನ್ಗಳಿಂದ ಶನಿವಾರ ಆಟ ಮುಂದುವರಿಸಿದ ಫಾಫ್ ಡುಪ್ಲೆಸಿ ಬಳಗ ಮೊದಲ ಇನಿಂಗ್ಸ್ನಲ್ಲಿ ದಿನದಾಟದ ಅಂತ್ಯಕ್ಕೆ 95 ಓವರ್ಗಳಲ್ಲಿ 7 ವಿಕೆಟ್ಗೆ 263ರನ್ ಕಲೆಹಾಕಿದೆ. 20 ರನ್ಗಳ ಮುನ್ನಡೆ ಪಡೆದಿದೆ.
ಸಂಕ್ಷಿಪ್ತ ಸ್ಕೋರ್: ಆಸ್ಟ್ರೇಲಿಯಾ: ಮೊದಲ ಇನಿಂಗ್ಸ್: 71.3 ಓವರ್ಗಳಲ್ಲಿ 243. ದಕ್ಷಿಣ ಆಫ್ರಿಕಾ: ಪ್ರಥಮ ಇನಿಂಗ್ಸ್: 95 ಓವರ್ಗಳಲ್ಲಿ 7 ವಿಕೆಟ್ಗೆ 263 (ಡೀನ್ ಎಲ್ಗರ್ 57, ಕಗಿಸೊ ರಬಾಡ 29, ಹಾಶೀಮ್ ಆಮ್ಲಾ 56, ಎಬಿ ಡಿವಿಲಿಯರ್ಸ್ ಬ್ಯಾಟಿಂಗ್ 74, ವರ್ನಾನ್ ಫಿಲಾಂಡರ್ ಬ್ಯಾಟಿಂಗ್ 14; ಮಿಷೆಲ್ ಸ್ಟಾರ್ಕ್ 78ಕ್ಕೆ1, ಜೋಶ್ ಹ್ಯಾಜಲ್ವುಡ್ 73ಕ್ಕೆ1, ಪ್ಯಾಟ್ ಕಮಿನ್ಸ್ 55ಕ್ಕೆ2, ನೇಥನ್ ಲಿಯೊನ್ 29ಕ್ಕೆ1, ಮಿಷೆಲ್ ಮಾರ್ಷ್ 26ಕ್ಕೆ2).
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.