ADVERTISEMENT

ದಸರಾ ಈಜು: ಯಾಕೂಬ್‌ಗೆ ಸ್ವರ್ಣ ಡಬಲ್

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2012, 19:30 IST
Last Updated 15 ಅಕ್ಟೋಬರ್ 2012, 19:30 IST

ಮೈಸೂರು: ಗುಲ್ಬರ್ಗ ವಿಭಾಗದ ಮೊಹ್ಮದ್ ಯಾಕೂಬ್ ಸಲೀಂ ಸೋಮವಾರ ಆರಂಭವಾದ ದಸರಾ ರಾಜ್ಯಮಟ್ಟದ ಕ್ರೀಡಾಕೂಟದ ಈಜು ಸ್ಪರ್ಧೆಯ ಪುರುಷರ ವಿಭಾಗದಲ್ಲಿ ಸ್ವರ್ಣ ಡಬಲ್ ಸಾಧನೆ ಮಾಡಿದರು.

ಸರಸ್ವತಿಪುರಂನಲ್ಲಿರುವ ಮೈಸೂರು ವಿಶ್ವವಿದ್ಯಾಲಯ ಈಜುಗೊಳದಲ್ಲಿ ನಡೆದ 200 ಮೀಟರ್ ಫ್ರೀಸ್ಟೈಲ್ ಮತ್ತು 400 ಮೀಟರ್ ಫ್ರೀಸ್ಟೈಲ್ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಗಳಿಸಿದರು. 

4x100ಮೀ ಫ್ರೀಸ್ಟೈಲ್ ರಿಲೆಯಲ್ಲಿ ಗುಲ್ಬರ್ಗ ತಂಡವು ಕಂಚಿನ ಪದಕ ಪಡೆಯುವಲ್ಲಿಯೂ ಯಾಕೂಬ್ ಪ್ರಮುಖ ಪಾತ್ರ ವಹಿಸಿದರು.

ಮಾಳವಿಕಾಗೆ ಚಿನ್ನ: ಬೆಂಗಳೂರು ನಗರ ತಂಡದ ವಿ. ಮಾಳವಿಕಾ ಮಹಿಳೆಯರ ವಿಭಾಗದ 400ಮೀಟರ್ ಫ್ರೀಸ್ಟೈಲ್‌ನಲ್ಲಿ ಚಿನ್ನ ಗಳಿಸಿದರು.

4x100 ಫ್ರೀಸ್ಟೈಲ್ ರಿಲೆ ಸ್ಪರ್ಧೆಯಲ್ಲಿ ಬೆಂಗಳೂರು ನಗರ ತಂಡವು ಬಂಗಾರದ ಪದಕ ಗೆಲ್ಲುವಲ್ಲಿಯೂ ಮಾಳವಿಕಾ ಉತ್ತಮ ಪ್ರದರ್ಶನ ನೀಡಿದರು.

ಪುರುಷರು ಮತ್ತು ಮಹಿಳೆಯರ ವಿಭಾಗದಲ್ಲಿ ಪ್ರಥಮ ದಿನ ನಡೆದ ಸ್ಪರ್ಧೆಗಳಲ್ಲಿ ಬೆಂಗಳೂರು ನಗರ ತಂಡವೇ ಹೆಚ್ಚು ಪದಕಗಳನ್ನು ಗೆಲ್ಲುವಲ್ಲಿ ಸಫಲವಾಗಿದೆ.

ಪುರುಷರು: 100 ಮೀ ಬ್ಯಾಕ್‌ಸ್ಟ್ರೋಕ್: ಎಂ. ಅರವಿಂದ್ (ಬೆಂಗಳೂರು ನಗರ)-1, ಎ.ಎಚ್. ಆಕಾಶ (ಮೈಸೂರು)-2, ಪುಷ್ಪಪ್ರಸಾದ್ (ಬೆಂಗಳೂರು ನಗರ)-3,  ಕಾಲ: 1ನಿ,05.44; 100ಮೀ ಬಟರ್‌ಫ್ಲೈ: ಚೇತನ್ ಬಿ ಆರಾಧ್ಯ (ಬೆಂಗಳೂರು ನಗರ)-1,  ಕೆ.ಎಸ್. ಪ್ರಜ್ವಲ್ (ಬೆಂಗಳೂರು ನಗರ)-2, ಎಚ್.ಸಿ. ಸನ್ಮಿತ್ -3, ಕಾಲ: 1ನಿ,02.37ಸೆ;

200 ಮೀ ಬ್ರೆಸ್ಟ್‌ಸ್ಟ್ರೋಕ್: ಜಿ. ಆದಿತ್ ರೋಷನ್  (ಬೆಂಗಳೂರು ನಗರ)-1,  ಜಿ. ಆಕಾಶ್ ರೋಹಿತ್ (ಬೆಂಗಳೂರು ನಗರ)-2, ಉಮೇಶ್ ಕಾಡಗಿ (ಬೆಳಗಾವಿ)-3,  ಕಾಲ: 2ನಿ,49.27ಸೆ;
 
200ಮೀ ಫ್ರೀಸ್ಟೈಲ್: ಮೊಹ್ಮದ್ ಯಾಕೂಬ್ ಸಲೀಂ (ಗುಲ್ಬರ್ಗ)-1, ಕಾಲ: 2ನಿ,06.16ಸೆ; ಆಕಾಶ ರೋಹಿತ್ (ಬೆಂಗಳೂರು ನಗರ)-2, ಎಂ. ಅವಿನಾಶ್ -3;

400 ಮೀ ಫ್ರೀಸ್ಟೈಲ್: ಮೊಹ್ಮದ್ ಯಾಕೂಬ್ ಸಲೀಂ (ಗುಲ್ಬರ್ಗ)-1 ಆದಿತ್ ರೋಷನ್ (ಬೆಂಗಳೂರು)-2, ವೈ. ಸುಹಾಸ್ (ಬೆಂಗಳೂರು ಗ್ರಾಮಾಂತರ)-3,  ಕಾಲ: 4ನಿ,31.34ಸೆ; 

4x100ಮೀ ಫ್ರೀಸ್ಟೈಲ್ ರಿಲೆ: ಬೆಂಗಳೂರು ನಗರ (ವಾಸವಾನಂದ, ರೇಣುಕಾಪ್ರಸಾದ್, ಎಂ.ಅವಿನಾಶ್, ಆಕಾಶ ರೋಹಿತ್)-1, ಮೈಸೂರು (ಬಿ. ಪೌರುಷ್, ಆರ್. ಕಾರ್ತಿಕ್, ಎ.ಎಚ್. ಆಕಾಶ್, ಎಚ್.ಸಿ. ಸನ್ಮಿತ್)-2,   ಗುಲ್ಬರ್ಗ (ಸಿ. ಕಾರ್ತಿಕ್, ಬಿ. ಉಮೇಶ್, ಎನ್. ಅಂಕಿತ್ ಕಂಜಾಲ್, ಮೊಹ್ಮದ್ ಯಾಕೂಬ್ ಸಲೀಂ)-3,  ಕಾಲ: 4ನಿ, 16.64ಸೆ;

ಮಹಿಳೆಯರು: 100ಮೀ ಬಟರ್‌ಫ್ಲೈ: ಪೂಜಾ ಆರ್. ಆಳ್ವಾ (ಬೆಂಗಳೂರು ನಗರ)-1, ದಾಮಿನಿ ಕೆ. ಗೌಡ -2, ಹೃತ್ವಿಕಾ ಎಂ. ಹುಲ್ಲೂರ್ (ಬೆಳಗಾವಿ)-3, ಕಾಲ: 1ನಿ, 49ಸೆ;

100ಮೀ ಬ್ಯಾಕ್‌ಸ್ಟ್ರೋಕ್: ದಾಮಿನಿ ಕೆ. ಗೌಡ (ಬೆಂಗಳೂರು ನಗರ)-1, ವಿ. ಶರಣ್ಯ (ಬೆಂಗಳೂರು ನಗರ)-2, ಸತ್ಯಶ್ರೀ (ಮೈಸೂರು)-3, ಕಾಲ: 1ನಿ, 17.90ಸೆ;

200ಮೀ. ಬ್ರೆಸ್ಟ್‌ಸ್ಟ್ರೋಕ್: ದಿವ್ಯಾ ಗುರುಸ್ವಾಮಿ (ಬೆಂಗಳೂರು ನಗರ)-1, ಆರ್. ಕೀರ್ತನಾ (ಬೆಂಗಳೂರು ನಗರ)-2, ಸುಹಾಸಿನಿ ಎಲ್. ಕಡಕೋಳ (ಮೈಸೂರು)-3, ಕಾಲ: 3ನಿ, 07ಸೆ;
 
200ಮೀ ಫ್ರೀಸ್ಟೈಲ್: ವಿ. ಮಾಳವಿಕಾ (ಬೆಂಗಳೂರು ನಗರ)-1,  ಪ್ರತೀಮಾ ಕೊಳಲಿ (ಬೆಂಗಳೂರು)-2, ಹೃತ್ವಿಕಾ ಎಂ. ಹುಲ್ಲೂರ್ (ಬೆಳಗಾವಿ)-3; ಕಾಲ: 2ನಿ,16.18ಸೆ;

400 ಮೀ ಫ್ರೀಸ್ಟೈಲ್: ವಿ. ಮಾಳವಿಕ (ಬೆಂಗಳೂರು ನಗರ)-1,  ಪ್ರತೀಮಾ ಕೊಳಲಿ (ಬೆಂಗಳೂರು ಸಿಸಿ)-2, ಸುಹಾಸಿನಿ ಎಲ್. ಕಡಕೋಳ (ಮೈಸೂರು)-3, ಕಾಲ: 4ನಿ, 46.08ಸೆ; 

4x100 ಫ್ರೀಸ್ಟೈಲ್ ರಿಲೆ: ಬೆಂಗಳೂರು ನಗರ (ದೀಕ್ಷಾ ರಮೇಶ್, ದಿವ್ಯಾ ಗುರುಸ್ವಾಮಿ, ಪ್ರತೀಮಾ ಕೊಳಲಿ, ವಿ. ಮಾಳವಿಕಾ)-1, ಮೈಸೂರು ವಿಭಾಗ (ಎಂ. ಅರುಂಧತಿ, ಸತ್ಯಶ್ರೀ, ಚೈತ್ರಾ, ಸುಹಾಸಿನಿ ಎಲ್. ಕಡಕೋಳ)-2, ಬೆಳಗಾವಿ ವಿಭಾಗ: (ಮಲ್ಲಿಕಾ ಹುಂಡೇಕರ್, ನಿಖಿತಾ ದತ್ತ ಬೋಸ್ಲೆ, ನಿವೇದಿತಾ ಡಿ. ಕೋಕಲೆ, ಹೃತ್ವಿಕಾ ಹುಲ್ಲೂರ್)-3 ಕಾಲ: 5ನಿ, 11.28ಸೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.