ರಿಯೊ ಡಿ ಜನೈರೊ (ಪಿಟಿಐ): ಭಾರತದ ಆರ್ಚರಿ ಸ್ಪರ್ಧಿಗಳು ನಾಲ್ಕು ವರ್ಷಗಳ ಹಿಂದೆ ಲಂಡನ್‌ನಲ್ಲಿ ನಡೆದಿದ್ದ ಒಲಿಂಪಿಕ್ಸ್‌ನಲ್ಲಿ ಅತಿಯಾದ ನಿರೀಕ್ಷೆ ಇಟ್ಟುಕೊಂಡು ಕಣಕ್ಕಿಳಿದಿದ್ದರು. ಆದರೆ ಯಾವುದೇ ಪದಕ ಲಭಿಸಿರಲಿಲ್ಲ.
ನಾಲ್ಕು ವರ್ಷಗಳ ಹಿಂದೆ ಮಾಡಿದ್ದ ತಪ್ಪುಗಳನ್ನು ತಿದ್ದಿಕೊಳ್ಳುವ ಅವಕಾಶ ಭಾರತದ ಆರ್ಚರಿ ಸ್ಪರ್ಧಿಗಳಿಗೆ ದೊರೆತಿದ್ದು, ರಿಯೊ ಡಿ ಜನೈರೊದಲ್ಲಿ ಪದಕದೆಡೆಗೆ ಗುರಿಯಿಡುವ ವಿಶ್ವಾಸ ಹೊಂದಿದ್ದಾರೆ.
ಒಲಿಂಪಿಕ್ ಕೂಟದ ಉದ್ಘಾಟನಾ ಸಮಾರಂಭ ಶುಕ್ರವಾರ ರಾತ್ರಿ (ಭಾರ ತೀಯ ಕಾಲಮಾನ ಪ್ರಕಾರ ಶನಿವಾರ ಬೆಳಗಿನ ಜಾವ) ನಡೆಯಲಿದೆ. ಆದರೆ ಫುಟ್‌ಬಾಲ್ ಮತ್ತು ಆರ್ಚರಿ ಸ್ಪರ್ಧೆ ಗಳಿಗೆ ಕೂಟದ ಉದ್ಘಾಟನೆಗೆ ಮುನ್ನವೇ ಚಾಲನೆ ಲಭಿಸಲಿದೆ.
ಲಂಡನ್‌ನಲ್ಲಿ ನಿರಾಸೆ: ಲಂಡನ್ ಕೂಟ ದಲ್ಲಿ ಭಾರತಕ್ಕೆ ಪದಕದ ಅತಿಯಾದ ನಿರೀಕ್ಷೆಯಿತ್ತು. ಒಲಿಂಪಿಕ್ ವೇಳೆ ದೀಪಿಕಾ ಕುಮಾರಿ ವಿಶ್ವ ರ್‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನದಲ್ಲಿದ್ದರು. ಭಾರತ ಮಹಿಳಾ ತಂಡ ಕೂಡಾ ಅಗ್ರಸ್ಥಾನದಲ್ಲಿತ್ತು. ಆದರೆ ದೀಪಿಕಾ ವೈಯಕ್ತಿಕ ವಿಭಾಗದ ಮೊದಲ ಸುತ್ತಿನಲ್ಲಿ ಬ್ರಿಟನ್‌ನ ಆಮಿ ಅಲಿವರ್ ಎದುರು ಸೋತು ಹೊರಬಿದ್ದಿದ್ದರು. ದೀಪಿಕಾ, ಬೊಂಬಯಾಲ ದೇವಿ ಮತ್ತು ಚೆಕ್ರೊವೊಲು ಸ್ವರೊ ಅವರನ್ನೊಳಗೊಂಡ ಮಹಿಳಾ ತಂಡ ಡೆನ್ಮಾರ್ಕ್ ಎದುರು ಮೊದಲ ಸುತ್ತಿನಲ್ಲಿ ಮುಗ್ಗರಿಸಿತ್ತು.
ದೀಪಿಕಾ ಪ್ರಸ್ತುತ ವಿಶ್ವ ರ್‍್ಯಾಂಕಿಂಗ್ ನಲ್ಲಿ ಅಗ್ರ ಹತ್ತರಲ್ಲಿ ಸ್ಥಾನ ಪಡೆದಿಲ್ಲ. ಭಾರತ ತಂಡ ನಾಲ್ಕನೇ ಸ್ಥಾನದಲ್ಲಿದೆ. ಆದರೂ ಭಾರತದ ಮಹಿಳಾ ಸ್ಪರ್ಧಿಗಳ ಮೇಲೆ ನಿರೀಕ್ಷೆ ಇಡಲಾಗಿದೆ. ಪುರುಷರ ವಿಭಾಗದಲ್ಲಿ ಅತಾನು ದಾಸ್ ಮಾತ್ರ ಭಾರತದ ಭರವಸೆ ಎನಿಸಿಕೊಂಡಿದ್ದಾರೆ. ಪುರುಷರ ತಂಡ ಈ ಬಾರಿ ಅರ್ಹತೆ ಗಿಟ್ಟಿಸಲು ವಿಫಲವಾಗಿದೆ. ದಾಸ್ ಅವರು ಆಯ್ಕೆ ಟ್ರಯಲ್ಸ್‌ನಲ್ಲಿ ತರುಣ್‌ದೀಪ್ ರಾಯ್ ಮತ್ತು ರಾಹುಲ್ ಬ್ಯಾನರ್ಜಿ ಅವರನ್ನು ಹಿಂದಿಕ್ಕಿದ್ದರು.
ವೈಯಕ್ತಿಕ ವಿಭಾಗದಲ್ಲಿ ಭಾರತದ ಯಾವುದೇ ಸ್ಪರ್ಧಿ ಪ್ರೀ ಕ್ವಾರ್ಟರ್ ಫೈನಲ್ ಹಂತ ದಾಟಿಲ್ಲ. ಸತ್ಯದೇವ್ ಪ್ರಸಾದ್ 12 ವರ್ಷಗಳ ಹಿಂದೆ ಪ್ರೀ ಕ್ವಾರ್ಟರ್ ಪ್ರವೇಶಿಸಿದ್ದರು. ಆದ್ದರಿಂದ ಈ ಬಾರಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದರೆ ಹೊಸ ಇತಿಹಾಸ ನಿರ್ಮಾಣವಾಗಲಿದೆ. ಉದ್ಘಾಟನಾ
ಸಮಾರಂಭಕ್ಕೆ ಗೈರು: ಭಾರತದ ಆರ್ಚರಿ ತಂಡದ ಸದಸ್ಯರು ಸ್ಪರ್ಧೆಯ ಮೇಲೆ ಗಮನ ಕೇಂದ್ರೀಕ ರಿಸಲು ನಿರ್ಧರಿಸಿದ್ದು, ಉದ್ಘಾಟನಾ ಸಮಾರಂಭ ಹಾಗೂ ಪಥಸಂಚಲನದಲ್ಲಿ ಪಾಲ್ಗೊಳ್ಳದಿರಲು ನಿರ್ಧರಿಸಿದ್ದಾರೆ. ‘ನಮಗೆ ಶುಕ್ರವಾರ ಸ್ಪರ್ಧೆ ಇದ್ದು, ಪಥಸಂಚಲನದಲ್ಲಿ ಪಾಲ್ಗೊಳ್ಳುವುದಿಲ್ಲ’ ಎಂದು ಭಾರತ ತಂಡದ ಕೋಚ್ ಧರ್ಮೇಂದ್ರ ತಿವಾರಿ ಹೇಳಿದ್ದಾರೆ.
ಇದು ಏಳನೇ ಒಲಿಂಪಿಕ್
ಭಾರತದ ಆರ್ಚರಿ ತಂಡ ಗಳಿಗೆ ಇದು ಏಳನೇ ಒಲಿಂಪಿಕ್ ಕೂಟ. ಈ ಕ್ರೀಡೆ 1988ರ ಸೋಲ್ ಕೂಟದಲ್ಲಿ ಮೊದಲ ಬಾರಿ ಸ್ಥಾನ ಪಡೆ ದಿತ್ತು.
ಆ ಬಳಿಕ ಸಿಡ್ನಿ (2000) ಒಲಿಂಪಿಕ್ಸ್ ಹೊರ ತುಪಡಿಸಿ ಇತರ ಎಲ್ಲ ಕೂಟಗಳಲ್ಲಿ ಭಾರತ ತಂಡಗಳು ಪಾಲ್ಗೊಂಡಿವೆ. ಮಹಿಳಾ ತಂಡ ಅಥೆನ್ಸ್ (2004) ಮತ್ತು ಬೀಜಿಂಗ್ ನಲ್ಲಿ (2008) ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದು, ಭಾರತದ ಇದು ವರೆಗಿನ ಅತ್ಯುತ್ತಮ ಸಾಧನೆಯಾಗಿದೆ.
ಭಾರತ ತಂಡ
ಮಹಿಳೆಯರ ವಿಭಾಗ: ದೀಪಿಕಾ ಕುಮಾರಿ, ಬೊಂಬಯಾಲ ದೇವಿ, ಲಕ್ಷ್ಮೀರಾಣಿ ಮಜಿ
ಪುರುಷರ ವಿಭಾಗ: ಅತಾನು ದಾಸ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.