ADVERTISEMENT

ದೋನಿ ಹಿಂದಿಕ್ಕಿದ ಕೊಹ್ಲಿ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2014, 19:30 IST
Last Updated 4 ಮಾರ್ಚ್ 2014, 19:30 IST

ನವದೆಹಲಿ (ಐಎಎನ್‌ಎಸ್‌): ವಿದೇಶಿ ನೆಲದಲ್ಲಿ ಸತತ ಸರಣಿ ಸೋಲಿನಿಂದಾಗಿ ಸಾಕಷ್ಟು ಟೀಕೆ ಎದುರಿಸಿದ್ದ ಭಾರತ ತಂಡದ ನಾಯಕ ಮಹೇಂದ್ರ ಸಿಂಗ್‌ ದೋನಿ ಅವರ ಜನಪ್ರಿಯತೆ ತಗ್ಗಿದ್ದು, ಸ್ಫೋಟಕ ಬ್ಯಾಟ್ಸ್‌ಮನ್‌ ವಿರಾಟ್‌ ಕೊಹ್ಲಿ ಜನಪ್ರಿಯತೆಯ ವಿಚಾರದಲ್ಲಿ ದೋನಿಯನ್ನು ಹಿಂದಿಕ್ಕಿ ಅಗ್ರಸ್ಥಾನ ಪಡೆದುಕೊಂಡಿದ್ದಾರೆ.

ಗೂಗಲ್‌ ಸರ್ಚ್‌ ಎಂಜಿನ್‌ ನಡೆಸಿರುವ ಅಧ್ಯಯನದಲ್ಲಿ ಈ ಅಂಶ ಬೆಳಕಿಗೆ ಬಂದಿದೆ. ಅಂತರ್ಜಾಲದ ಹುಡುಕಾಟದಲ್ಲಿ ಹೆಚ್ಚಿನ ಬಳಕೆದಾರರು ದೋನಿಗಿಂತಲೂ ಕೊಹ್ಲಿಯ ಬಗೆಗಿನ ಮಾಹಿತಿ ಕಲೆಹಾಕಲು ಆಸಕ್ತಿ ತೋರಿರುವುದು  ಈ ಅಧ್ಯಯನದಿಂದ ತಿಳಿದು ಬಂದಿದೆ.

ಐಪಿಎಲ್‌ ಏಳನೇ ಆವೃತ್ತಿಯ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ  ₨14 ಕೋಟಿಗೆ ಆರ್‌ಸಿಬಿ ಪಾಲಾಗಿದ್ದ ಯುವರಾಜ್‌ ಸಿಂಗ್‌ ಅಂತರ್ಜಾಲ ಹುಡುಕಾಟದಲ್ಲಿ ಕೊಹ್ಲಿ ಹಾಗೂ ದೋನಿಯ ನಂತರದ ಸ್ಥಾನವನ್ನು ಪಡೆದುಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.