ADVERTISEMENT

ಧ್ರುವ್‌, ಸಬೀನಾ ಮುಡಿಗೆ ಪ್ರಶಸ್ತಿ

ಟೆನ್‌ಪಿನ್

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2013, 19:30 IST
Last Updated 15 ಡಿಸೆಂಬರ್ 2013, 19:30 IST

ಬೆಂಗಳೂರು: ನವದೆಹಲಿಯ ಧ್ರುವ್‌ ಸರ್ದಾ ಹಾಗೂ ತಮಿಳು ನಾಡಿನ ಸಬೀನಾ ಭಾನುವಾರ ಇಲ್ಲಿ ಕೊನೆಗೊಂಡ 25ನೇ ರಾಷ್ಟ್ರೀಯ ಟೆನ್‌ಪಿನ್‌ ಬೌಲಿಂಗ್‌ ಟೂರ್ನಿಯಲ್ಲಿ ಕ್ರಮವಾಗಿ ಪುರುಷ ಹಾಗೂ ಮಹಿಳೆಯರ ವಿಭಾಗ ದಲ್ಲಿ ಚಾಂಪಿಯನ್‌ ಆಗಿದ್ದಾರೆ.

ಒರಾಯನ್‌ ಮಾಲ್‌ನ ‘ಬ್ಲೂ ಒ’ ಬೌಲಿಂಗ್‌ ಸೆಂಟರ್‌ನಲ್ಲಿ ನಡೆದ ಪುರುಷರ ವಿಭಾಗದ ಕೊನೆಯ ದಿನದ ಸ್ಪರ್ಧೆಯಲ್ಲಿ ಧ್ರುವ್‌ 414–369ರಿಂದ ಕರ್ನಾಟಕದ ಆಕಾಶ್‌ ಅಶೋಕ್‌ ಕುಮಾರ್‌ ಅವರನ್ನು ಮಣಿಸಿದರು. ನಾಕ್‌ಔಟ್‌ ಹಂತದಲ್ಲಿ ಎರಡು ಸುತ್ತುಗಳ ಫೈನಲ್‌ ಸ್ಪರ್ಧೆ ನಡೆಯಿತು. ಹೋದ ಬಾರಿ ಕೂಡ ಧ್ರುವ್‌ ಚಾಂಪಿಯನ್‌ ಆಗಿದ್ದರು.

ಮಹಿಳೆಯರ ವಿಭಾಗದಲ್ಲಿ ಸಬೀನಾ 353–307ರಿಂದ ಕರ್ನಾಟಕದ ಜೂಡಿ ಅಲ್ಬಾನ್‌ ಎದುರು ಗೆದ್ದರು. ಸಬೀನಾ ಆರಂಭದಿಂದಲೇ ಮುನ್ನಡೆ ಕಾಯ್ದುಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.